ಅಥಣಿ ಗೋಟಖಿಂಡಿಮಠದ ಮಹಾಂತ ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವದ ಪೂರ್ವಭಾವಿ ಸಭೆಯಲ್ಲಿ ಲಾಂಛನ ಬಿಡುಗಡೆಗೊಳಿಸಲಾಯಿತು. ಪ್ರಭುಚನ್ನಬಸವ ಸ್ವಾಮೀಜಿ, ಪ್ರಕಾಶ ಮಹಾಜನ, ರಮೇಶಗೌಡ ಪಾಟೀಲ, ಸುರೇಶ ಗೋಟಖಿಂಡಿ ಇತರರಿದ್ದರು. 
ಜಿಲ್ಲೆ

ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವ 25ರಿಂದ

ಅಥಣಿ: ಪಟ್ಟಣದ ಗೋಟಖಿಂಡಿಮಠದ ಪೂಜ್ಯ ಲಿಂ.ಮಹಾಂತ ಶಿವಯೋಗಿಗಳ ಶತಮಾನೋತ್ಸವ ಪೂರ್ವಭಾವಿ ಸಭೆ ಬುಧವಾರ ಜರುಗಿತು.

25ರಿಂದ ಮೋಟಗಿಮಠದ ಪ್ರಭು ಚನ್ನಬಸವ ಸ್ವಾಮೀಜಿ ಮಾತನಾಡಿ, ಅಥಣಿ ಗಚ್ಚಿನಮಠದ ಮುರುಘೇಂದ್ರ ಶಿವಯೋಗಿಗಳ ಪರಂಪರೆಯ ಶಿವ ಸಾಧಕರು ಗೋಟಖಿಂಡಿ ಮಠದ ಮಹಾತಪಸ್ವಿ ಮಹಾಂತ ಶಿವಯೋಗಿಗಳು. ಅ.25 ಮತ್ತು 26 ರಂದು ಅವರ ಲಿಂಗೈಕ್ಯ ಶತಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಥಣಿ ಅಧ್ಯಾತ್ಮ ಪರಂಪರೆ ಹಿರಿಮೆ ಮುನ್ನಡೆಸಿದವರಲ್ಲಿ ಶ್ರೀಗಳು ಪ್ರಮುಖರು ಎಂದರು.

ಶತಮಾನೋತ್ಸವ ನಿಮಿತ್ತ ಸಮಾಜ ಸೇವಕ ಗಜಾನನ ಮಂಗಸೂಳಿ ಶ್ರೀಗಳ ಲಾಂಛನ ಲೋಕಾರ್ಪಣೆಗೊಳಿಸಿದರು. ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ, ರಮೇಶಗೌಡ ಪಾಟೀಲ, ಸುರೇಶ ಗೋಟಖಿಂಡಿ, ಈರಣ್ಣ ಗೋಟಖಿಂಡಿ, ಪ್ರಕಾಶ ಮಹಾಜನ, ಮಲ್ಲಿಕಾರ್ಜುನ ಗೋಟಖಿಂಡಿ, ಮುರುಗೆಪ್ಪ ತೊದಲಬಾಗಿ, ಮುರಗೆಪ್ಪ ಮಮದಾಪುರ, ಮಹಾದೇವ ಹೊನ್ನಳ್ಳಿ, ಐ.ಡಿ.ಪಾಟೀಲ, ಅರುಣ ಯಲಗುದ್ರಿ, ಶಿವಾನಂದ ಬುರ್ಲಿ ಇತರರಿದ್ದರು. ಡಾ.ಮಹಾಂತೇಶ ಉಕ್ಕಲಿ ಸ್ವಾಗತಿಸಿದರು. ಆನಂದ ಸವದಿ ನಿರೂಪಿಸಿದರು.