ತರೀಕೆರೆ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ನೂತನ ಅಧ್ಯಕ್ಷರಾಗಿ ಎಲ್.ಎಸ್.ಶಿವಯೋಗಿ ಅವಿರೋಧ ಆಯ್ಕೆಯಾದರು.
ಎನ್.ಬಿ.ಸುಧಾಕರ್ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಲ್.ಎಸ್.ಶಿವಯೋಗಿ ಮಾತ್ರ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಸಹಕಾರ ಇಲಾಖೆ ಸಹಾಯಕ ನಿಬಂದಕ ವೆಂಕಟೇಶ್‌ಮೂರ್ತಿ ನೂತನ ಅಧ್ಯಕ್ಷರ ಆಯ್ಕೆ ಘೋಷಿಸಿದರು.
ನೂತನ ಅಧ್ಯಕ್ಷ ಎಲ್.ಎಸ್.ಶಿವಯೋಗಿ ಮಾತನಾಡಿ, ಸುವರ್ಣ ಮಹೋತ್ಸವ ಪೂರೈಸಿರುವ ಟಿಎಪಿಸಿಎಂಎಸ್ ರೈತರಿಗೆ ಅನುಕೂಲ ಕಲ್ಪಿಸುವ ದಿಸೆಯಲ್ಲಿ ಪ್ರಯತ್ನ ನಿರಂತರಗೊಳಿಸಿದೆ. ಕೃಷಿ ಉತ್ಪನ್ನ ಮಾರಾಟದ ಮೂಲಕ ಲಾಭಗಳಿಸುತ್ತಿದ್ದು, ಲಾಭಾಂಶದಲ್ಲಿ ಗೋದಾಮು ನವೀಕರಣಗೊಳಿಸಿ ಗೊಬ್ಬರ ಮಾರಾಟ ಮಾಡಲಾಗುತ್ತಿದೆ. ಎಲ್ಲರ ಸಹಕಾರದಿಂದ ಮತ್ತಷ್ಟು ಪ್ರಗತಿಗೆ ಯೋಜನೆ ರೂಪಿಸುವ ಗುರಿ ಹೊಂದಲಾಗಿದ್ದು, ಅಧಿಕಾರಾವ ಮುಗಿಯುವುದರೊಳಗೆ ಹಂತ ಹಂತವಾಗಿ ಉದ್ದೇಶಿತ ಯೋಜನೆ ಕಾರ್ಯಗತಗೊಳಿಸಲಾಗುವುದು ಎಂದರು.
ಮಾಜಿ ಶಾಸಕ ಹಾಗೂ ಜಿಲ್ಲಾ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಎಸ್.ಸುರೇಶ್, ನಿರ್ದೇಶಕರಾದ ಕೆ.ಆರ್.ಆನಂದಪ್ಪ, ಟಿ.ಎಲ್.ರಮೇಶ್, ಟಿಎಪಿಸಿಎಂಎಸ್ ಉಪಾಧ್ಯಕ್ಷೆ ಪದ್ಮಾ, ನಿರ್ದೇಶಕರಾದ ವಸಂತ್‌ಕುಮಾರ್, ಎಂ.ನರೇಂದ್ರ, ಎನ್.ಬಿ.ಸುಧಾಕರ್, ಶಂಭೈನೂರು ಆನಂದಪ್ಪ, ಜಿ.ಎಸ್.ವಸಂತ್‌ಕುಮಾರ್, ತಿಮ್ಮೇಶ್ ಬಾಬು, ಮಂಜುನಾಥ್, ದಯಾನಂದ್ ಮತ್ತಿತರರಿದ್ದರು.