ಅರಸೀಕೆರೆ: ಕರೆ,ಕಟ್ಟೆಗಳನ್ನು ಕಟ್ಟುವ ಮೂಲಕ ಶಿವಯೋಗಿ ಶ್ರೀ ಗುರು ಸಿದ್ದರಾಮೇಶ್ವರರು ನಡೆಸಿದ ಸಾಮಾಜಿಕ ಕ್ರಾಂತಿ ಹೊಸ ಬೆಳಕು ನೀಡಿತು ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ತಾಲೂಕು ಆಡಳಿತದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಶ್ರೀ ಗುರುಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ನೂರಾರು ದೇಗುಲ, ಕೆರೆ,ಕಟ್ಟೆಗಳನ್ನು ಕಟ್ಟುವ ಮೂಲಕ ಸಮಾಜದ ಅಭ್ಯುದಯಕ್ಕೆ ಶ್ರಮಿಸಿದ್ದಾರೆ. ಅವರ ತತ್ವಗಳು ವಚನಗಳಲ್ಲಿ ಮೂಡಿಬಂದಿವೆ. ಅವರ ಸಂದೇಶ ಪಾಲಿಸಿದರೆ ಬದುಕು ಪರಿಪೂರ್ಣವಾಗಲಿದೆ ಎಂದರು.
ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್ˌಜಿ.ಪಂ.ಸದಸ್ಯರಾದ ಪಟೇಲ್ ಶಿವಪ್ಪˌ ಮಾಡಾಳು ಸ್ಪಾಮಿ ಇದ್ದರು