ಜಿಲ್ಲೆ

ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಶಿವಶಂಕರ್ ಆಯ್ಕೆ

ನಾಗೇಶ ಎಸ್

ಕೊಳ್ಳೇಗಾಲ: ರಾಜ್ಯ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸರಗೂರು ಗ್ರಾಮದ ಶಿವಶಂಕರ್, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ದರ್ಶನ್, ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಮುಳ್ಳೂರು ಗ್ರಾಮದ ಅಜಯ್ ಆಯ್ಕೆಯಾಗಿದ್ದಾರೆ.

ಭಾರತೀಯ ಕಾಂಗ್ರೆಸ್ ಸಮಿತಿ ವತಿಯಿಂದ 2024 ಆಗಸ್ಟ್ ರಿಂದ ಅಕ್ಟೋಬರ್ ತಿಂಗಳವರೆಗೆ ರಾಜ್ಯ ಯುವ ಕಾಂಗ್ರೆಸ್ ಪದಾಧಿಕಾರಿಗಳ ಚುನಾವಣೆ ಆನ್‌ಲೈನ್ ಮೂಲಕ ನಡೆದಿತ್ತು. ಯುವ ಮತದಾರರು ತಮ್ಮ ನೆಚ್ಚಿನ ಸ್ಪರ್ಧಿಗಳಿಗೆ ರಾಜ್ಯಾದ್ಯಂತ ಮತ ಚಲಾಯಿಸಿದ್ದರು.

ಫೆ.7ರಂದು ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಸರಗೂರು ಗ್ರಾಮದ ಶಿವಶಂಕರ್ ಅವರು 24,277 ಮತ ಪಡೆದು ನೂತನ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. 11,973 ಮತ ಪಡೆದು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ದರ್ಶನ್ ಆಯ್ಕೆಯಾಗಿದ್ದಾರೆ. 1,702 ಮತ ಪಡೆದ ಶಿವರಾಜ್ ಹಾಗೂ 440 ಮತಗಳನ್ನು ಪಡೆದು ಅಬ್ದುಲ್ ಕರೀಂ ಅವರು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. 6,319 ಮತಗಳನ್ನು ಪಡೆದು ಕೊಳ್ಳೇಗಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಅಜಯ್ ಮುಳ್ಳೂರು ಚುನಾಯಿತರಾಗಿದ್ದಾರೆ. 493 ಮತಗಳನ್ನು ಮುಸ್ತಾಯಿದ್ ಮತ್ತು 316 ಮತಗಳನ್ನು ಪಡೆದು ಪುರುಷೋತ್ತಮ್ ತೇರಂಬಳ್ಳಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.