ಜಿಲ್ಲೆ

ಕೇಶವನಾಥೇಶ್ವರ ದೇಗುಲದಲ್ಲಿ ಶಿವರಾತ್ರಿ

ಕುಂದಾಪುರ: ಕೆರಾಡಿ ಗ್ರಾಮದ ಮೂಡುಗಲ್ಲುವಿನಲ್ಲಿರುವ ಅಪರೂಪದ ಗುಹಾಂತರ ಶ್ರೀಕೇಶವನಾಥೇಶ್ವರ ದೇವಸ್ಥಾನದಲ್ಲಿ ಬುಧವಾರ ಮಹಾಶಿವರಾತ್ರಿ ಉತ್ಸವವು ವಿವಿಧ ಪೂಜಾ ಕಾರ‌್ಯಕ್ರಮಗಳೊಂದಿಗೆ ನಡೆಯಿತು.

ಬೆಳಗ್ಗೆ ಮಂಗಳಾರತಿ, ಇತರೆ ಪೂಜಾ ವಿಧಿಗಳು, ಮಧ್ಯಾಹ್ನ ಮಹಾ ಮಂಗಳಾರತಿ, ಅನ್ನಸಂತರ್ಪಣೆ, ಭಜನೆ ನೆರವೇರಿತು. ಆಡಳಿತ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು.