ಜಿಲ್ಲೆ

ಅಧ್ಯಾತ್ಮ ಶಕ್ತಿಯ ವಿಕಸನದಿಂದ ಪ್ರಗತಿ : ಮಾಣಿಲ ಶ್ರೀ ಆಶೀರ್ವಚನ

ಸೌಮ್ಯ ಆರ್

ಬಂಟ್ವಾಳ: ಅಧ್ಯಾತ್ಮ ಶಕ್ತಿಯ ವಿಕಸನದಿಂದ ಮನುಷ್ಯ ಪ್ರಗತಿಶೀಲನಾಗಲು ಸಾಧ್ಯ ಎಂದು ಮಾಣಿಲ ಶ್ರೀಧಾಮದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ ಬಿ.ಸಿ.ರೋಡ್‌ನ ಮಿನಿ ವಿಧಾನಸೌಧ ಮುಂಭಾಗ ಹಾಗೂ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ಬಳಿ ಶಿವರಾತ್ರಿ ಹಿನ್ನೆಲೆಯಲ್ಲಿ ದ್ವಾದಶ ಜ್ಯೋತಿರ್ಲಿಂಗ ಪ್ರದರ್ಶನದಲ್ಲಿ ಆಶೀರ್ವಚನ ನೀಡಿದರು.

ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ದೇವನು ಒಬ್ಬನೇ ಎಂದು ಹೇಳಿದರೂ ನಮ್ಮ ದೇವರು ಬೇರೆ, ನಿಮ್ಮ ದೇವರು ಬೇರೆ ಎಂಬ ಭಿನ್ನಾಭಿಪ್ರಾಯ ತಳೆಯುವವರು ಇರುವ ಈ ಹೊತ್ತಿನಲ್ಲಿ ಇಂಥ ಕಾರ್ಯಕ್ರಮಗಳು ಪ್ರಸ್ತುತವಾಗಿದೆ ಎಂದರು.

ಶಂಭೂರು ಪ್ರೌಢಶಾಲೆ ಕಾರ್ಯಾಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ಅಧ್ಯಕ್ಷ ಬಿ.ವಿಶ್ವನಾಥ್, ಪ್ರೊ.ಡಾ.ಬಾಲಕೃಷ್ಣ ಕಲ್ಲೂರಾಯ, ಚಿಣ್ಣರಲೋಕ ಮೋಕೆದ ಕಲಾವಿದರ್ ಸೇವಾ ಟ್ರಸ್ಟ್ ಸಂಚಾಲಕ ಮೋಹನದಾಸ ಕೊಟ್ಟಾರಿ, ನಂದಾವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಪ್ರಭಾಕರ ಶೆಟ್ಟಿ ಉಪಸ್ಥಿತರಿದ್ದರು.

ರಾಜಯೋಗಿನಿ ಶಾಂತಾ ಸಂದೇಶ ನೀಡಿದರು. ಬ್ರಹ್ಮಕುಮಾರಿ ಸಾವಿತ್ರಿ ಸ್ವಾಗತಿಸಿದರು. ಬ್ರಹ್ಮಕುಮಾರ ಗಣಪತಿ ಕಾರ್ಯಕ್ರಮ ನಿರ್ವಹಿಸಿದರು. 12 ಜ್ಯೋತಿರ್ಲಿಂಗದ ಪ್ರತಿಕೃತಿ ಪ್ರದರ್ಶನಕ್ಕಿಡಲಾಗಿದ್ದು, 28ರವರೆಗೆ ಬೆಳಗ್ಗೆ 9ರಿಂದ ರಾತ್ರಿ 8ರವರೆಗೆ ಪ್ರದರ್ಶನ ನಡೆಯಲಿದೆ.