ಕೊಪ್ಪಳ: ಬಿಜೆಪಿಯಲ್ಲಿ ಸಿಎಂ ಸ್ಥಾನ ಸೇರಿ ಎಲ್ಲ ಹುದ್ದೆಗಳು ಹರಾಜಿಗಿವೆ. ಸಿಎಂಗೆ 2500 ಕೋಟಿ ರೂ., ಮಂತ್ರಿಗಳಿಗೆ 70-80 ಕೋಟಿ ರೂ., ಶಾಸಕರಿಗೆ 5-7 ಕೋಟಿರೂ. ದರ ನಿಗದಿಯಾಗಿದೆ. ವಿಪಕ್ಷ ನಾಯಕನ ಸ್ಥಾನಕ್ಕೆ ಇನ್ನು ಟೆಂಡರ್ ಕರೆದಂತಿಲ್ಲವೆಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಲೇವಡಿ ಮಾಡಿದರು.
ವಿಪಕ್ಷ ಸ್ಥಾನಕ್ಕೆ ಇನ್ನೂ ದರ ನಿಗದಿಯಾಗಿಲ್ಲ. ಹೀಗಾಗಿ ಟೆಂಡರ್ ಕರೆದಿಲ್ಲ. 100-200 ಕೋಟಿ ರೂ.ಗೆ ಹರಾಜಾಗಬಹುದು. ಜೆಡಿಎಸ್‌ನವರಿಗೂ ನೀಡಿದರೂ ನೀಡಬಹುದು. ಹಿಂದೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ಆಗಲು 2500 ಕೋಟಿ ರೂ. ನೀಡಬೇಕೆಂದು ಹೇಳಿದ್ದರು.
ಸದ್ಯ ರಾಜ್ಯದಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಚೈತ್ರಾ ಕುಂದಾಪುರ ಮತ್ತು ಇತರರು ಮಾಡಿದ ವಂಚನೆ ಪ್ರಕರಣ ಗಮನಿಸಿದರೆ ಇದು ನಿಜ ಎನಿಸುತ್ತಿದೆ. ಸದ್ಯದಲ್ಲೇ ಲೋಕಸಭೆ ಚುನಾವಣೆ ಇದ್ದು, ಎಂಪಿ ಟಿಕೆಟ್‌ಗಳನ್ನು ಮಾರಾಟಕ್ಕಿಟ್ಟರೂ ಅಚ್ಚರಿ ಇಲ್ಲವೆಂದು ಕೊಪ್ಪಳದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.