ಜಿಲ್ಲೆ

ದೇವಾಲಯಗಳಿಂದ ಸ್ಥಳಿಯ ಸಂಸತಿಗೆ ಉತ್ತೇಜನ

ಗೋಪಾಲಕೃಷ್ಣ ಪಾದೂರ್

ಉಡುಪಿ: ಪ್ರಾಚಿನ ಕಾಲದಿಂದಲೂ ದೇವಸ್ಥಾನಗಳು ಕಲೆ ಮತ್ತು ಸಂಸತಿಗೆ ಆಶ್ರಯತಾಣಗಳಾಗಿದ್ದು, ಆಧ್ಯಾತ್ಮಿಕತೆ ಜೊತೆಗೆ ಕೃಷಿ, ಯಕ್ಷಗಾನ, ಆರೋಗ್ಯ ಕ್ಷೇತ್ರದತ್ತ ಗಮನಹರಿಸಿರುವುದು ಶ್ಲಾನೀಯ ಕಾರ್ಯ ಎಂದು ಮಾಜಿ ಸಚಿವ, ಶಾಸಕ ಸುನೀಲ್​ ಕುಮಾರ್​ ಹೇಳಿದರು.

ಬುಧವಾರ ಮಣಿಪಾಲದ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ವಠಾರದಲ್ಲಿ ಶಿವರಾತ್ರಿಯ ಅಂಗವಾಗಿ ದೇವಳದ ಅಭಿವೃದ್ಧಿ ಟ್ರಸ್ಟ್​ ಹಾಗು ಶಿವಪಾಡಿ ವೈಭವ ಆಚರಣಾ ಸಮಿತಿಯ ವತಿಯಿಂದ ಆಯೋಜಿಸಿರುವ ಯಕ್ಷಗಾನ, ಕೃಷಿ, ಆರೋಗ್ಯ, ಆಹಾರ ಮೇಳ 'ಶಿವಪಾಡಿ ವೈಭವ" ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಇಂಥ ಕಾರ್ಯಕ್ರಮ ಆಯೋಜನೆ ಮೂಲಕ ದೇವಸ್ಥಾನದ ಬೆಳವಣಿಗೆ ಜೊತೆಗೆ ಗ್ರಾಮೀಣ ಆರ್ಥಿಕತೆಗೆ ಶಕ್ತಿ ನೀಡಿದಂತಾಗುತ್ತದೆ. ಕುಂಭಮೇಳದಲ್ಲಿ ಭಾರತೀಯತೆ ವಿರಾಟ್​ರೂಪದ ಪ್ರದರ್ಶನವಾಗಿದ್ದು, ಶಿವಪಾಡಿಯಲ್ಲಿ ಗ್ರಾಮೀಣ ಸಂಸತಿಯ ಪರಿಚಯವಾಗಿದೆ ಎಂದರು.

ಶಿವಪಾಡಿ ವೈಭವ ಆಚರಣಾ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಕೆ.ರಘುಪತಿ ಭಟ್​, ದೇವಳದ ಆಡಳಿತ ಮೊಕ್ತೇಸರ ಮಹೇಶ್​ ಠಾಕೂರ್​, ವಿಪ ಮಾಜಿ ಸದಸ್ಯ ದಯಾನಂದ ರೆಡ್ಡಿ, ಸುಪ್ರೀಂ ಕೋರ್ಟ್​ ಹಿರಿಯ ವಕೀಲ ಶೇಖರ್​ ದೇವಸ್ಯ, ಮಾಹೆ ಸಿಇಒ ರವಿರಾಜ್​, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್​ ಕುಮಾರ್​, ಆರೆಸ್ಸೆಸ್​ ಮುಖಂಡ ಶಂಭು ಶೆಟ್ಟಿ, ನಗರಸಭಾ ಸದಸ್ಯ ರಮೇಶ್​ ಕಾಂಚನ್​, ಉದ್ಯಮಿ ಪ್ರಸಾದ್​ ರಾಜ್​ ಕಾಂಚನ್​, ವಕೀಲ ಉಮೇಶ್​ ಶೆಟ್ಟಿ ಕಳತ್ತೂರು, ಕಾರ್ತಿಕ್​, ಜಯಪ್ರಕಾಶ್​, ಅಶೋಕ್​ ಕುಮಾರ್​, ದೇವಸ್ಥಾನದ ಶಾಶ್ವತ ಟ್ರಸ್ಟಿ ದಿನೇಶ್​ ಸಾಮಂತ್​, ಟ್ರಸ್ಟಿಗಳಾದ ಸತೀಶ್​ ಪಾಟೀಲ್​, ಶುಭಕರ್​ ಸಾಮಂತ್​, ಪ್ರಕಾಶ್​ ಪ್ರಭು, ಅಶೋಕ್​ ಸಾಮಂತ್​, ಸಾಂಸತಿಕ ಕಾರ್ಯದರ್ಶಿ ನಾಗರಾಜ್​ ಕಾಮತ್​, ಶಿವಪಾಡಿ ವೈಭವ ಆಚರಣಾ ಸಮಿತಿಯ ಪ್ರ.ಕಾರ್ಯದರ್ಶಿ ಪ್ರಕಾಶ್​ ಕುಕ್ಕೆಹಳ್ಳಿ, ದೇವಳದ ಅಭಿವೃದ್ಧಿ ಟ್ರಸ್ಟ್​ನ ಕಾರ್ಯದರ್ಶಿ ಗೋಪಾಲಕೃಷ್ಣ್ಣ ಪ್ರಭು ಉಪಸ್ಥಿತರಿದ್ದರು.