ವಿಜಯವಾಣಿ ಸುದ್ದಿಜಾಲ ಗದಗ
ಹಾನಗಲ್ ಕುಮಾರ ಶ್ರೀಗಳು ಸಮಾಜದ ಶ್ರೇಯೋಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿದ್ದಾರೆ. ಮಠದ ಸ್ವಾಮಿಗಳಾದರಷ್ಟೇ ಸಾಲದು, ಮಠದ ಸ್ವಾಮಿಗಳಾದವರು ನಿರಂತರ ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕಲಿಸಿಕೊಟ್ಟವರು ಹಾನಗಲ್ ಕುಮಾರ ಶ್ರೀಗಳು ಎಂದು ಉಪನ್ಯಾಸಕ ಐ.ಬಿ. ಬೆನಕೊಪ್ಪ ಹೇಳಿದರು.
ತೋಂಟದಾರ್ಯ ಮಠದಲ್ಲಿ ಇತ್ತಿಚೆಗೆ ಜರುಗಿದ ಲಿಂಗಾಯತ ಪ್ರಗತಿಶೀಲ ಸಂದ 2659ನೇ ಶಿವಾನುಭವದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಹಾನಗಲ್ ಕುಮಾರ ಸ್ವಾಮಿಗಳು ಮಠಗಳಲ್ಲಿ ಪ್ರಸಾದ ನಿಲಯ, ಶಿಣ ಸಂಸ್ಥೆಗಳನ್ನು ಪ್ರಾರಂಭಿಸಲು ಪ್ರೇರಣೆ ನೀಡುವ ಮೂಲಕ ಮಠದ ಸ್ವಾಮಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಹಳ್ಳಿ ಹಳ್ಳಿಗೆ ಸಂಚರಿಸಿ ಬಡವರ ಉದ್ಧಾರ, ಧಾಮಿರ್ಕ ಸಂಸ್ಕಾರ, ಶಿಣ ನೀಡುವ ಕಾಯಕ ಮಠಗಳಿಂದ ಆಗಬೇಕು ಎಂಬ ಸಂದೇಶ ನೀಡಿದ್ದಾರೆ. ಸಮಾಜ ಬದಲಾವಣೆಯನ್ನು ಹೊಂದಬೇಕಾದರೆ ಕಾಲಮಾನಕ್ಕೆ ತಕ್ಕಂತೆ ಯುಗಪುರುಷರ ಉದಯವಾಗುತ್ತದೆ ಎಂದು ಹೇಳಲಾಗುತ್ತದೆ. ಅಂತಹ ಕಾರಣಿಕ ಯುಗಪುರುಷರೇ ನಮ್ಮ ಹಾನಗಲ್ಲ ಕುಮಾರಸ್ವಾಮಿಗಳವರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮ್ಮುಖ ವಹಿಸಿದ್ದ ಭೈರನಹಟ್ಟಿ ಶಾಂತಲಿಂಗ ಸ್ವಾಮಿಗಳು ಮಾತನಾಡಿ, ಅಥಣಿ ಮುರುಂದ್ರ ಶಿವಯೋಗಿಗಳು ಅಪೂರ್ವ ಸಾಧಕರಲ್ಲಿ ಒಬ್ಬರು. ವಚನಗಳೆಂದರೆ ಅವರಿಗೆ ಬಹಳಷ್ಟು ಪ್ರೀತಿ. ನಿತ್ಯ ವಚನ ಪಠಣ ತಪ್ಪದೇ ಮಾಡುತ್ತಿದ್ದರು. ಅಪ್ಪಟ ಬಸವ ಅನುಯಾಯಿಗಳು. ಹಾನಗಲ್ ಕುಮಾರಸ್ವಾಮಿಗಳು ಧಾಮಿರ್ಕ, ಆಧ್ಯಾತ್ಮಿಕ, ಶೈಣಿಕ ೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ಶಿವಯೋಗ ಮಂದಿರವನ್ನು ಸ್ಥಾಪಿಸಿ ನಾಡಿನ ಸರ್ವತೋಮುಖ ಏಳಿಗೆಗಾಗಿ ಅನೇಕ ಸಾಧಕರನ್ನು ನಾಡಿಗೆ ಕೊಡುಗೆಯಾಗಿ ನೀಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೇಷ್ಠ ಉದ್ಯಮಿ ಪ್ರಶಸ್ತಿಗೆ ಭಾಜನರಾದ ಭೂಷಣ ಪ್ರಕಾಶ ಶಹಾ ಅವರನ್ನು ಸನ್ಮಾನಿಸಲಾಯಿತು.
ಶೇಖಣ್ಣ ಕಳಸಾಪೂರ, ರತ್ನಕ್ಕ ಪಾಟೀಲ, ಬಾಲಚಂದ್ರ ಭರಮಗೌಡರ, ರೇಣುಕಾ ಕರೇಗೌಡ್ರ, ಮಹೇಶ ಗಾಣಿಗೇರ, ವಿಜಯಕುಮಾರ ಹಿರೇಮಠ, ವಿರುಪಾಪ್ಪ ಅರಳಿ, ಅಶೋಕ ಹಾದಿ, ಸುರೇಶ ನಿಲೂಗಲ್, ವಿವೇಕಾನಂದಗೌಡ ಪಾಟೀಲ ಇದ್ದರು.