ವಿಜಯವಾಣಿ ಸುದ್ದಿಜಾಲ ಗದಗ
ಕವಿರಾಜಮಾರ್ಗದಲ್ಲಿ ಶ್ರೀವಿಜಯನು ಕರ್ನಾಟಕದ ಕುರಿತು ವಣಿರ್ಸಿದ್ದಾನೆ. ಕನ್ನಡ ನಾಡು ಕಾವೇರಿಯಿಂದ ಗೋದಾವರಿಯವರೆಗೆ ಹರಡಿತ್ತು ಎಂದು ತಿಳಿಸಿದ್ದಾನೆ. ಶ್ರೀವಿಜಯನ ಕಾಲ ಬಸವಾದಿ ಶರಣರಿಗೆ ಅತ್ಯಂತ ಸಮೀಪದ ಕಾಲವಾಗಿತ್ತು ಎಂದು ತೋಂಟದ ಸಿದ್ಧರಾಮ ಶ್ರಿಗಳು ಹೇಳಿದರು.
ನಗರದ ತೋಂಟದಾರ್ಯ ಮಠದಲ್ಲಿ ಇತ್ತೀಚೆಗೆ ಜರುಗಿದ ಶಿವಾನುಭ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಕನ್ನಡ ಮಾತನಾಡುವವರ ಪ್ರದೇಶ ಗೋದಾವರಿಯವರೆಗೆ ವ್ಯಾಪಿಸಿತ್ತು, ಬಹಳಷ್ಟು ವಿಶಾಲ ಮತ್ತು ವ್ಯಾಪಕವಾಗಿತ್ತು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಗೋದಾವರಿ ಮತ್ತು ಕಾವೇರಿಯ ಮಧ್ಯದ ಭಾಗ ಬಸವಕಲ್ಯಾಣ ಕನ್ನಡ ಭಾಷಿಕರ ಕೇಂದ್ರ ಸ್ಥಾನವಾಗಿತ್ತು. ಮಹಾರಾಷ್ಟ್ರದ ಔರಂಗಾಬಾದ ಜಿಲ್ಲೆಯಲ್ಲಿ ಕನ್ನಡ ಎಂಬ ಹೆಸರಿನಲ್ಲಿ ತಾಲೂಕು ಇದೆ. ಮೊದಲಿಗೆ ಗೋದಾವರಿವರೆಗೆ ಇದ್ದ ಕನ್ನಡ ನಾಡು ಕಾಲಾಂತರದಲ್ಲಿ ಬೇರೆ ಬೇರೆ ಆಳ್ವಿಕೆಗೆ ಒಳಪಟ್ಟು ಸೊರಗಿತು. ಮಹಾರಾಷ್ಟ್ರದಲ್ಲಿ ಲಭಿಸಿರುವ ಶಾಸನಗಳಲ್ಲಿ 100 ಕ್ಕೆ 90 ರಷ್ಟು ಶಾಸನಗಳು ಕನ್ನಡಲ್ಲಿಯೆ ಇವೆ ಎಂದು ಶ್ರೀಗಳು ಹೇಳಿದರು.
ಮುಂಬೈ ಕರ್ನಾಟಕ ಭಾಗದಲ್ಲಿ 1850 ರ ಅವಧಿಯಲ್ಲಿ 300 ಕ್ಕೂ ಹೆಚ್ಚು ಮರಾಠಿ ಶಾಲೆಗಳಿದ್ದವು. 3 ಕನ್ನಡ ಶಾಲೆಗಳು ಮಾತ್ರ ಇದ್ದವು. ಕನ್ನಡದ ಶಖಪುರುಷ ಡೆಪ್ಯೂಟಿ ಚನ್ನಬಸಪ್ಪನವರು ಧಾರವಾಡ ಶಿಣ ಇಲಾಖೆಯಲ್ಲಿ ಶಾಲಾ ಇನಸ್ಪೆಕ್ಟರ್ ಆಗಿ ಕನ್ನಡವನ್ನು ಉಳಿಸಿ ಬೆಳೆಸಲು ಮಹತ್ತರ ಕಾರ್ಯಗಳನ್ನು ಮಾಡಿದರು. ಡೆಪ್ಯೂಟಿ ಚನ್ನಬಸಪ್ಪನವರು ಪ್ರತಿ ಹಳ್ಳಿಗಳಲ್ಲಿಯೂ ಕನ್ನಡ ಶಾಲೆಗಳನ್ನು ತೆರೆಯಲು ತೀರ್ಮಾನ ಕೈಕೊಂಡರು. ಕರ್ನಾಟಕ ಏಕೀಕರಣಕ್ಕಾಗಿ ಡೆಪ್ಯೂಟಿ ಚನ್ನಬಸಪ್ಪನವರು, ಆಲೂರು ವೆಂಕಟರಾಯರು, ಹುಯಿಲಗೋಳ ನಾರಾಯಣರಾಯರು ಸೇರಿದಂತೆ ಸಾಕಷ್ಟು ಜನರ ಸೇವೆ, ಶ್ರಮ, ಶ್ರದ್ಧೆಗಳು ಕಾರಣವಾಗಿವೆ ಎಂದು ಶ್ರೀಗಳು ಸ್ಮರಿಸಿದರು.
ವಿಜಯನಗರ ಮಹಾವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಡಾ. ಗಾದೆಪ್ಪ ಉಪನ್ಯಾಸ ನೀಡಿ ಮಾತನಾಡಿ, ಕನ್ನಡ, ಕನ್ನಡಿಗ, ಕರ್ನಾಟಕ, ಕರ್ನಾಟಕತ್ವ ಇವು ತುಂಬ ಚಚಿರ್ತವಾದಂತ ಪದಗಳು. ಕನ್ನಡ ಎಂದರೆ ಭಾಷೆ, ಕನ್ನಡಿಗ ಎಂದರೆ ಭಾಷಿಕ, ಕರ್ನಾಟಕ ಎಂದರೆ ಕನ್ನಡಿಗರೆಲ್ಲರೂ ಕೂಡಿಕೊಂಡು ವಾಸಿಸುವ ಒಂದು ಭೂಪ್ರದೇಶ. ಕರ್ನಾಟಕತ್ವ ಎಂಬ ಪದವನ್ನು ಮೊದಲಿಗೆ ಆಲೂರ ವೆಂಕಟರಾಯರು ಬಳಸಿದರು. ಕರ್ನಾಟಕತ್ವ ಎಂದರೆ ನಮ್ಮ ಕರ್ನಾಟಕದ ಸಂಸತಿಗೆ ಪರಂಪರೆಗೆ ಬದ್ಧವಾಗಿರುವಂತ ಪದ. ಕರ್ನಾಟಕದಲ್ಲಿ ರಾಜಕಾರಣ, ಧರ್ಮ, ಇತಿಹಾಸ, ಕಲೆ, ಸಂಸತಿ ಎಲ್ಲವೂ ಇದೆ. ಮೌರ್ಯರು, ಕದಂಬರು, ಮೈಸೂರು ವಡೆಯರ ರಾಜ್ಯದವರೆಗೆ ಕನ್ನಡದ ಶಾಸನಗಳು ಲಭಿಸುತ್ತವೆ. ಅವುಗಳಲ್ಲಿ ಹಲ್ಮಿಡಿ ಶಾಸನ ಮೊದಲನೆಯದಾಗಿದೆ ಎಂದು ತಿಳಿಸಿದರು.
ನಿಜಗುಣಪ್ರಭು ಶ್ರೀಗಳು. ಧೀರೇಂದ್ರ ಹುಯೀಲಗೋಳ ಮಾತನಾಡಿದರು. ವಿದ್ಯಾದಾನ ಸಮಿತಿಯ ಕಾರ್ಯದಶಿರ್ ಶ್ರೀನಿವಾಸ ಹುಯಿಲಗೋಳ, ಧೀರಣ್ಣ ಹುಯಿಲಗೊಳ ಅವರನ್ನು ಸನ್ಮಾನಿಸಲಾಯಿತು.
ಶೇಖಣ್ಣ ಕಳಸಾಪೂರ, ಬಾಲಚಂದ್ರ ಭರಮಗೌಡರ, ರೇಣುಕಾ ಕರೇಗೌಡ್ರ, ಮಹೇಶ ಗಾಣಿಗೇರ, ವಿಜಯಕುಮಾರ ಹಿರೇಮಠ, ವಿರುಪಾಪ್ಪ ಅರಳಿ, ಅಶೋಕ ಹಾದಿ, ಸುರೇಶ ನಿಲೂಗಲ್, ವಿವೇಕಾನಂದಗೌಡ ಪಾಟೀಲ ಇತರರು ಇದ್ದರು.