ಗದಗ ತಾಲೂಕಿನ ಹರ್ಲಾಪೂರ ಕೊಟ್ಟೂರೇಶ್ವರ ಮಠದಲ್ಲಿ ನಡೆದ ಶಿವಾನುಭವಗೋಷ್ಠಿ ಕಾರ್ಯಕ್ರಮದಲ್ಲಿ ನೂತನ ಪಿ.ಎಲ್​.ಡಿ ಬ್ಯಾಂಕ ಅಧ್ಯ ಮಾರುತಿರೆಡ್ಡಿ ಕೊಣ್ಣೂರ ದಂಪತಿಗಳನ್ನು ಸನ್ಮಾನಿಸಲಾಯಿತು. ಕೊಟ್ಟೂರೇಶ್ವರ ಶ್ರೀಗಳು, ಡಾ. ಜಗನ್ನಥರಾವ್​, ಕೆ. ಬಿ. ಕೊಣ್ಣೂರು, ಕೆ.ಬಿ. ವಿರಾಪೂರ, ಸಿದ್ಧಲಿಂಗೇಶ ಯಾಳವಾಡ ಇತರರು ಇದ್ದರು 
ಜಿಲ್ಲೆ

ಹರ್ಲಾಪೂರ ಗ್ರಾಮದಲ್ಲಿ 285ನೇ ಶಿವಾನುಭವಗೋಷ್ಠಿ

Gadag - Shivanand Hiremath

ಗದಗ:
ತಾಲೂಕಿನ ಹರ್ಲಾಪುರ ಗ್ರಾಮದ ಕೊಟ್ಟೂರೇಶ್ವರ ಮಠದಲ್ಲಿ ಸೋಮವಾರ 285ನೇ ಶಿವಾನುಭವಗೋಷ್ಠಿ ಮತ್ತು ಕೆವಿಎಸ್​ಆರ್​ ಕಾಲೇಜಿನ ಎನ್​ಎಸ್​ಎಸ್​ ಶಿಬಿರಾಥಿರ್ಗಳ ಸಾಂಸತಿಕ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಸಾನ್ನಿದ್ಯ ವಹಿಸಿ ಮಾತನಾಡಿದ ಕೊಟ್ಟೂರೇಶ್ವರ ಶ್ರೀಗಳು, ಮಹಾತ್ಮ ಗಾಂದೀಜಿಯವರ ಸತ್ಯ, ಅಂಹಿಸೆ, ತ್ಯಾಗದ ಗುಣಗಳನ್ನು ವಿದ್ಯಾಥಿರ್ಗಳು ಅಳವಡಿಸಿಕೊಂಡಾಗ ಗುರಿ ಮುಟ್ಟಲು ಸಾಧ್ಯ. ಎನ್​ಎಸ್​ಎಸ್​ ಶಿಬಿರಾಥಿರ್ಗಳು ಶೃದ್ದೆಯಿಂದ ಶಿಬಿರದಲ್ಲಿ ಭಾಗವಹಿಸಿದಾಗ ಮಾತ್ರ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿಕೊಳ್ಳುವ ಕುರಿತು ತಿಳಿಯುತ್ತದೆ ಎಂದರು.
ಪಶು ವೈದ್ಯಕಿಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಜಗನ್ನಥರಾವ್​ ಮಾತನಾಡಿ, ಪ್ರಾಣಿ ಜನ್ಯ ರೋಗಗಳ ಕುರಿತು ಉಪನ್ಯಾಸ ನೀಡಿದರು. ಡಾ ಸಂತೋಷ ಸಜ್ಜನ ಅವರು ಪ್ರಾಣಿ ಜೀವ ಸಂಕುಲದ ಕುರಿತು ವಿವರಿಸಿದರು.
ಪಿಎಲ್​ಡಿ ಬ್ಯಾಂಕ್​ ನೂತನ ಅಧ್ಯಕ್ಷರಾಗಿ ಆಯ್ಕೆ ಆದ ಮಾರುತಿರೆಡ್ಡಿ ಕೊಣ್ಣೂರು ದಂಪತಿಗಳನ್ನು ಸನ್ಮಾನಿಸಲಾಯಿತು.
ಉಪನ್ಯಾಸಕ ಪ್ರದಿಪ ನಾಯಕ, ಮುಖ್ಯೋಪಾಧ್ಯಯ ಕೆ. ಬಿ. ಕೊಣ್ಣೂರು, ಕೆ.ಬಿ. ವಿರಾಪೂರ, ಸಿದ್ಧಲಿಂಗೇಶ ಯಾಳವಾಡ, ನವೀನ ಟಿಕಾರ್​, ರಾಮಣ್ಣ ಬೆಳಧಡಿ ಹಲವರು ಇದ್ದರು.