ಜಿಲ್ಲೆ

ಭಕ್ತಿಯಿಂದ ಭಗವಂತನ ಕಾಣಬಹುದು

ರಮೇಶ ಮೇಳಕುಂದಾ

ಬಸವಕಲ್ಯಾಣ: ಭಕ್ತಿಯನ್ನು ಆಚರಿಸುವ ಮಾರ್ಗ ಸುಲಭವಾಗಿದೆ. ಸತ್ಯ ಸದ್ಗುರುವಿನ ಸಂಸ್ಕಾರದಿಂದ ನಮ್ಮ ಶರೀರದಲ್ಲಿಯೇ ನಿರಾಕಾರ ಪರಶಿವನನ್ನು ಕಾಣಬಹುದು. ಶರಣರ, ಸಂತರ, ಅನುಭವಿಗಳ ಸಂಗದಲ್ಲಿದ್ದರೆ ನಿತ್ಯ ಮುಕ್ತರಾಗಲು ಸಾಧ್ಯ ಎಂದು ಡಾ.ಗಂಗಾAಬಿಕ ಅಕ್ಕ ಹೇಳಿದರು.
ಶಿವಾಜಿ ನಗರದಲ್ಲಿ ಅರಿವು ಆಚಾರ ಅನುಭವ ಕೇಂದ್ರದ ಶಿವಸದನ ವೇದಿಕೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಮಾಸಿಕ ಎರಡನೇ ಅನುಭವ ಗೋಷ್ಠಿ ಹಾಗೂ ವಚನಾಭಿಷೇಕ ಕಾರ್ಯಕ್ರಮದಲ್ಲಿ ಮಾತನಾಡಿ, ನಿಜ ಮುಕ್ತಿಯ ಸಾಧನೆ ಪಡೆದುಕೊಳ್ಳುವ ಸಾಧಕ ಅನುಭವಿಗಳನ್ನು ತಯಾರಿಸುವ ಕಾರ್ಯ ಮಾಡಬೇಕು ಎಂದರು.
ಅನುಭವ ಮಂಟಪ ಸಂಚಾಲಕ ಶ್ರೀ ಶಿವಾನಂದ ಸ್ವಾಮೀಜಿ ಮಾತನಾಡಿ, ಜನರಲ್ಲಿ ಎಲ್ಲವೂ ಇದೆ ಆದರೆ ಸಾಧನೆ ಮಾಡುವ ಮನಸ್ಸಿಲ್ಲ. ಮಾನವ ಜನ್ಮ ಪಡೆದ ಮೂಲ ಉದ್ದೇಶ ಮರೆತರೆ ಹುಟ್ಟು ಸಾವುಗಳ ಭವದಲ್ಲಿ ಬೀಳುವುದು ನಿಶ್ಚಿತ. ಶರಣಾನುಭಾವಿಗಳ ಸಂಗದಿಂದ ಭವದಿಂದ ಮುಕ್ತರಾಗಲು ಸಾಧ್ಯ ಎಂದರು.
ಶೋಭಾ ಘಾಳೆ ಮಾತನಾಡಿದರು. ಸುಲೋಚನ, ಸತ್ಯಕ್ಕ, ಶಾರದಾ ನಾಗರಾಳೆ, ಜಗದೇವಿ ಪಾಟೀಲ್, ಸುಲೋಚನಾ ಗುದಗೆ, ಬಸವರಾಜೇಶ್ವರಿ ನಾಗರಾಳೆ, ಅಂಬಿಕಾ ನಾಗರಾಳೆ, ಪಂಡಿತ ನಾಗರಾಳೆ, ಸುನಿತಾ ಪಾಟೀಲ್, ಮಮತಾ ನಾಗರಾಳೆ, ಶರಣಪ್ಪ ಕೆ.ಕೆ, ಸುಭಾಷ ಕಾಳಗೆ, ಮೇಘರಾಜ ನಾಗರಾಳೆ ಇತರರಿದ್ದರು. ರಂಜನ ಬುಶೆಟ್ಟಿ ವಚನ ಗಾಯನ ನಡೆಸಿಕೊಟ್ಟರು. ಬಸವರಾಜು ಪಂಡಿತ್ ನಿರೂಪಣೆ ಮಾಡಿದರು.