ಜಿಲ್ಲೆ

ಭೈರತಿ ರಣಗಲ್ ಚಿತ್ರ ವೀಕ್ಷಿಸಿದ ಶಿವಣ್ಣ

ಶಿರಸಿ: ಚಿತ್ರನಟ ಶಿವರಾಜಕುಮಾರ ಅವರು ನಗರದ ನಟರಾಜ ಚಿತ್ರಮಂದಿರದಲ್ಲಿ ಭೈರತಿ ರಣಗಲ್ ಚಿತ್ರವನ್ನು ಭಾನುವಾರ ವೀಕ್ಷಿಸಿದರು.

ಚಿತ್ರ ಮಂದಿರದ ಎದುರು ನೆರೆದಿದ್ದ ಸಾವಿರಾರು ಅಭಿಮಾನಿಗಳು ಹೂವಿನಸುರಿಮಳೆಗೈದು, ಬೃಹತ್ ಹೂವಿನ ಹಾರ ಹಾಕಿ ಡಾ.ಶಿವರಾಜಕುಮಾರ ಅವರನ್ನು ಸ್ವಾಗತಿಸಲಾಯಿತು.

ಬಳಿಕ ಚಿತ್ರವನ್ನು ಗೀತಾ ಶಿವರಾಜಕುಮಾರ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಸಕ ಭೀಮಣ್ಣ ನಾಯ್ಕ, ಅಶ್ವಿನ್ ಭೀಮಣ್ಣ ಇತರರೊಂದಿಗೆ ವೀಕ್ಷಿಸಿದರು.

ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳ ನೂಕುನುಗ್ಗಲು ಉಂಟಾಗಿತ್ತು. ಬಾಲ್ಕನಿಯಲ್ಲಿ ಕುಳಿತು ಶಿವಣ್ಣ ಚಿತ್ರ ವೀಕ್ಷಿಸಿದರು. ಚಿತ್ರಮಂದಿರ ಹೌಸ್‌ಫುಲ್ ಆಗಿತ್ತು.