ಜಿಲ್ಲೆ

ಅಣ್ಣಿಗೇರಿ ಪುರಸಭೆಗೆ ಶಿವಾನಂದ ಅಧ್ಯಕ್ಷ, ನಾಗಪ್ಪ ಉಪಾಧ್ಯಕ್ಷ

ಅಣ್ಣಿಗೇರಿ: ಅಭ್ಯರ್ಥಿಯೊಬ್ಬರು ಕೋರ್ಟ್ ಮೆಟ್ಟಿಲೇರಿದ್ದರಿಂದ ಕಳೆದ ಆರು ತಿಂಗಳ ಹಿಂದೆ ನಡೆಯಬೇಕಾಗಿದ್ದ ಸ್ಥಳೀಯ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಕೋರ್ಟ್ ಆದೇಶದ ಮೇರೆಗೆ ಸೋಮವಾರ ನಡೆಯಿತು.

ಅಧ್ಯಕ್ಷ ಸ್ಥಾನವು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದರಿಂದ ಪಟ್ಟಣದ ಪುರಸಭೆಯಲ್ಲಿ ಪರಿಶಿಷ್ಟ ಪಂಗಡದಿಂದ 16ನೇ ವಾರ್ಡಿನ ಶಿವಾನಂದ ಬೆಳಹಾರ ಪಕ್ಷೇತರ ಅಭ್ಯರ್ಥಿ ಒಬ್ಬರೇ ಇದ್ದಿದ್ದರಿಂದ ಅವರನ್ನೇ ಅವಿರೋಧವಾಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷ ಸ್ಥಾನವು ಹಿಂದುಳಿದ ವರ್ಗಕ್ಕೆ ಮೀಸಲಾಗಿದ್ದರಿಂದ ಇಬ್ಬರ ನಡುವೆ ಪೈಪೋಟಿ ಏರ್ಪಟ್ಟು ಒಂದನೇ ವಾರ್ಡಿನ ಪಕ್ಷೇತರ ಅಭ್ಯರ್ಥಿ ನಾಗಪ್ಪ ದಳವಾಯಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಗೆದ್ದ ಅಭ್ಯರ್ಥಿಗಳ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ನಂತರ ಶಾಸಕ ಎನ್.ಎಚ್. ಕೋನರಡ್ಡಿ ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಬಳಿಕ ಮಾತನಾಡಿದ ಶಾಸಕರು, ಚುನಾವಣೆ ಸಂದರ್ಭದಲ್ಲಿ ಮಾತ್ರ ನಾನು ರಾಜಕೀಯ ಮಾಡುತ್ತೇನೆ ನಂತರ ತಾಲೂಕಿನ ಸರ್ವತೋಮುಖ ಅಭಿವೃದ್ಧಿಯತ್ತ ನಾನು ದಿಟ್ಟ ಹೆಜ್ಜೆ ಇಟ್ಟಿದ್ದೇನೆ. ರಾಜ್ಯದ ನಾನಾ ಮೂಲೆಗಳಿಂದ ಅಧಿಕಾರಿಗಳು, ಶಾಸಕರು, ಸಚಿವರು ಇಲ್ಲಿನ ಅಭಿವೃದ್ಧಿ ಮನಗಂಡು ಈ ಮತಕ್ಷೇತ್ರಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ಚುನಾವಣಾಧಿಕಾರಿಯಾಗಿ ಮಂಜುನಾಥ ದಾಸಪ್ಪನವರ ಕಾರ್ಯನಿರ್ವಹಿಸಿದರು. ಪುರಸಭೆ ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡರ, ಸಿಪಿಐ ರವಿಕುಮಾರ ಕಪ್ಪತ್ತನವರ, ಪೊಲೀಸ್ ಠಾಣಾಧಿಕಾರಿ ಸಿದ್ಧಾರೂಢ ಆಲದಕಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮಾಯಣ್ಣವರ, ಮುತ್ತು ದ್ಯಾವನೂರ, ಮಹಾಂತೇಶ ತಹಸೀಲ್ದಾರ್ ಜಗದೀಶ ಸೋಮಣ್ಣನವರ, ಎ.ಪಿ. ಗುರಿಕಾರ, ಇಮಾಮ್ಾಬ್ ದರವಾಣಿ ಸಂಜು ನಾಗಕೇರಿ, ವಿನೋದ ಉಳಾಗಡ್ಡಿ, ಸಾಗರ ಕಾಳಪ್ಪನವರ, ವಿ.ವಿ. ಬೆಂತೂರ, ಅಶೋಕ ದಳವಾಯಿ, ರಮೇಶ ಕರೇಟನವರ, ಇತರರಿದ್ದರು.