ರಾಯಬಾಗ: ಶಿವನಾಮ ಸ್ಮರಣೆಯಿಂದ ಜೀವನ ಸಾರ್ಥಕವಾಗುತ್ತದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಮಹಾಲಿಂಗಪುರ ಸೇವಾಕೇಂದ್ರದ ಸಂಚಾಲಕಿ ಶಿವಲೀಲಾ ಅಕ್ಕ ಹೇಳಿದರು.
ಪಟ್ಟಣದ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಕೇಂದ್ರದ ವತಿಯಿಂದ ಬುಧವಾರ 89ನೇ ಶಿವರಾತ್ರಿ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಶಿವರಾತ್ರಿ ಆಧ್ಯಾತ್ಮಿಕ ರಹಸ್ಯ ಕಾರ್ಯಕ್ರಮದಲ್ಲಿ ಮಾತನಾಡಿ, ಅಂತರಾತ್ಮವನ್ನು ಅರಿತುಕೊಳ್ಳುವವರೆಗೆ ಪರಮಾತ್ಮನನ್ನು ಅರಿಯುವುದು ಅಸಾಧ್ಯ. ಆಧ್ಯಾತ್ಮಿಕವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಮಾಜಿ ಸಂಸದ ಅಮರಸಿಂಹ ಪಾಟೀಲ, ರಾಯಬಾಗ ಸೇವಾ ಕೇಂದ್ರದ ಪುಷ್ಪ ಅಕ್ಕ, ಶಿರಗುಪ್ಪಿ ಸೇವಾ ಕೇಂದ್ರದ ನೀತಾ ಅಕ್ಕ, ತಾತ್ಯಾಸಾಬ ಕಾಟೆ, ಡಿ.ಎಸ್.ನಾಯಿಕ, ದಶರಥ ಶೆಟ್ಟಿ, ಬಸಯ್ಯ ನಿಶಾನಮಠ, ಹರೀಶ ಕುಲಗುಡೆ, ಎ.ಬಿ.ಮಂಗಸೂಳೆ, ಡಿ.ಎಲ್.ಮಿರ್ಜೆ, ಎಚ್.ಎ.ಭಜಂತ್ರಿ, ಸಂಗಣ್ಣ ದತ್ತವಾಡೆ, ಅಪ್ಪಾಸಾಹೇಬ ಮುಗಳಖೋಡ, ಸದಾನಂದ ಹಳಿಂಗಳಿ, ಶಿವಪುತ್ರ ಅಮರಶೆಟ್ಟಿ, ಬಿ.ಎಂ.ಮಾಳಿ, ಲಗಮಣ್ಣ ಪಾಟೀಲ, ರಾಜಕುಮಾರ ಧುಮಾಳೆ, ಅಜಿತ