ಸಾಗರ ಮತ್ತು ಹೊಸನಗರ ಕ್ಷೇತ್ರದ ರೈತರು ಹಾಗೂ ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಬಿಜೆಪಿಯಿಂದ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಮಲ್ಲಿಕಾರ್ಜುನ ಹಕ್ರೆ, ಡಾ. ರಾಜನಂದಿನಿ ಕಾಗೋಡು, ಗಣೇಶ್ ಪ್ರಸಾದ್, ಪ್ರಸನ್ನ ಕೆರೆಕೈ, ಪ್ರಶಾಂತ ಇತರರಿದ್ದರು. 
ಶಿವಮೊಗ್ಗ

ರೈತರ ಸಮಸ್ಯೆಗೆ ಸ್ಪಂದಿಸಿ ಪರಿಹಾರ ಕಲ್ಪಿಸಿ BJP Protest

Sagara: On Tuesday, the BJP staged a protest in front of the Sub-Divisional Officer’s office, demanding solutions to the pressing problems faced by farmers and the general public in the Hosanagara and Sagara constituencies.

ಸಾಗರ: ಹೊಸನಗರ, ಸಾಗರ ಕ್ಷೇತ್ರದ ರೈತರು ಹಾಗೂ ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಮಂಗಳವಾರ ಬಿಜೆಪಿಯಿಂದ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ತಲೆತಲಾಂತರದಿಂದ ನಮ್ಮ ಕುಟುಂಬ ಸಾಗುವಳಿ ಮಾಡಿಕೊಂಡು ಬಂದಿರುವ ಕೆಪಿಸಿ ಭೂಮಿ ತೆರವಿಗೆ ಅಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ಶಾಸಕರು ನನ್ನ ವಿರುದ್ಧ ನಿಂತರೆ ಅವರಿಗೆ ಉಳಿಗಾಲವಿಲ್ಲ. ಕೆಪಿಸಿ ಭೂಮಿಗೆ ಸಂಬಂಧಪಟ್ಟ ವ್ಯಾಜ್ಯ ಸುಪ್ರೀಂ ಕೋರ್ಟ್‌ನಲ್ಲಿದೆ. ಶಾಸಕರು ಹೊಂದಿರುವ ಅಕ್ರಮ ಭೂಮಿ ಬಗ್ಗೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಎಚ್ಚರಿಸಿದರು.

ಡಾ. ರಾಜನಂದಿನಿ ಕಾಗೋಡು ಮಾತನಾಡಿ, ತಾಲೂಕಿನಲ್ಲಿ ದ್ವೇಷದ ರಾಜಕಾರಣ ಹೆಚ್ಚುತ್ತಿದೆ. ನಮ್ಮ ತಂದೆಯವರ ಹೆಸರು ಹೇಳಿಕೊಂಡು ಗೆದ್ದ ಶಾಸಕ ಗೋಪಾಲಕೃಷ್ಣ ಬೇಳೂರು ಚುನಾವಣೆ ಗೆದ್ದು ಹದಿನೈದು ದಿನಗಳಲ್ಲಿ ನಮ್ಮ ವಿದ್ಯಾಸಂಸ್ಥೆಗೆ ನೋಟಿಸ್ ನೀಡಿದ್ದರು. ಕಾಗೋಡು ತಿಮ್ಮಪ್ಪ ಅವರು ಚುನಾವಣೆ ಸಂದರ್ಭದಲ್ಲಿ ಮಾತ್ರ ಪಕ್ಷ, ಗೆದ್ದ ಮೇಲೆ ಅಭಿವೃದ್ಧಿ ಪಕ್ಷಾತೀತವಾಗಿ ಇರಬೇಕು ಎಂದು ಕಿವಿಮಾತು ಹೇಳಿದವರು ಎಂದರು.

ಪ್ರತಿಭಟನೆಯಲ್ಲಿ ಗಣೇಶ್‌ಪ್ರಸಾದ್, ಪ್ರಸನ್ನ ಕೆರೆಕೈ, ಪ್ರಶಾಂತ, ಮಧುರಾ ಶಿವಾನಂದ್, ಶ್ರೀನಿವಾಸ್ ಮೇಸ್ತ್ರಿ, ದೇವೇಂದ್ರಪ್ಪ, ವೀರೇಶ್, ಯುವರಾಜ್, ಗಿರೀಶ್ ಹಕ್ರೆ, ರಮೇಶ್, ರಾಮಪ್ಪ, ಪ್ರವೀಣ್, ಆರ್.ಎಸ್.ಗಿರಿ, ಪರಶುರಾಮ್, ಮೈತ್ರಿ ಪಾಟೀಲ್, ಪ್ರೇಮಾ ಸಿಂಗ್, ಸವಿತಾ ವಾಸು ಇತರರಿದ್ದರು.