ಶಿಕಾರಿಪುರದಲ್ಲಿ ಲೇಖಕ ರವಿ ಹಂಜ್​ ವಿರುದ್ಧ ಶ್ರೀ ಚನ್ನಬಸವ ಸ್ವಾಮೀಜಿ, ಮಾತೆ ಶರಣಾಂಬಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಎನ್​.ವಿ.ಈರೇಶ್​, ಸುಧೀರ್​, ಶಶಿಧರ ಸ್ವಾಮಿ, ರುದ್ರಮುನಿ, ಗುರುರಾಜ್​ ಇತರರಿದ್ದರು.  Strict action should be taken against Ravi Hanj
ಶಿವಮೊಗ್ಗ

ರವಿ ಹಂಜ್​ ವಿರುದ್ಧ ಕಠಿಣ ಕ್ರಮ ಜರುಗಿಸಲಿ

ವೀರಶೈವ ಲಿಂಗಾಯತ ಮಹಾಸಭಾ ಒತ್ತಾಯ > ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ

ಶಿಕಾರಿಪುರ: ಬಸವಣ್ಣ ಅವರ ಕುರಿತು ಲೇಖಕ ರವಿ ಹಂಜ್​ "ಬಸವ ಮಂಟಪ' ಕೃತಿಯಲ್ಲಿ ಅವಹೇಳನ ಮಾಡಿರುವುದನ್ನು ಖಂಡಿಸಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಟಕದ ಪ್ರಮುಖರು ಸೋಮವಾರ ಪ್ರತಿಭಟನೆ ನಡೆಸಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.

ಶಿಕಾರಿಪುರದ ಬಸವೇಶ್ವರ ಪುತ್ಥಳಿ ಎದುರು ವಿರಕ್ತಮಠದ ಶ್ರೀ ಚನ್ನಬಸವ ಸ್ವಾಮೀಜಿ ಮತ್ತು ಬಸವಾಶ್ರಮದ ಮಾತೆ ಶರಣಾಂಬಿಕೆ ನೇತೃತ್ವದಲ್ಲಿ ಸೇರಿದ ಮಹಾಸಭಾ ಪದಾಧಿಕಾರಿಗಳು, ವಿವಿಧ ಸಂಟನೆಗಳ ಕಾರ್ಯಕರ್ತರು ಹಾಗೂ ಸಮಾಜದ ಮುಖಂಡರು, ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪ್ರತಿಭಟನೆಗೆ ಚಾಲನೆ ನೀಡಿದರು. ಬಸವೇಶ್ವರ ವೃತ್ತದಿಂದ ಪ್ರಮುಖ ಬೀದಿಗಳ ಮೂಲಕ ತಹಸೀಲ್ದಾರ್​ ಕಚೇರಿವರೆಗೆ ಶಾಂತಿಯುತ ಮೆರವಣಿಗೆ ನಡೆಸಲಾಯಿತು.

ವಿರಕ್ತಮಠದ ಶ್ರೀ ಚನ್ನಬಸವ ಸ್ವಾಮೀಜಿ ಮಾತನಾಡಿ, 12ನೇ ಶತಮಾನದಲ್ಲೇ ಸಮಾನತೆ, ಕಾಯಕ ಮತ್ತು ದಾಸೋಹ ತತ್ವಗಳ ಮೂಲಕ ಮಾದರಿಯಾದ ಮಹಾನ್​ ದಾರ್ಶನಿಕ ಬಸವಣ್ಣ ಅವರ ಬಗ್ಗೆ ಡಾ. ರವಿ ಹಂಜ್​ ತನ್ನ ಕೃತಿಯಲ್ಲಿ ಅವಹೇಳನ ಮಾಡಿರುವುದು ಖಂಡನೀಯ. ಇದು ಕೇವಲ ಒಂದು ಸಮುದಾಯಕ್ಕೆ ಮಾಡಿದ ಅಪಮಾನವಲ್ಲ. ಮನುಕುಲದ ಮೌಲ್ಯಗಳಿಗೆ ಬಗೆದ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯ ಸುಧೀರ್​ ಮಾರವಳ್ಳಿ ಮಾತನಾಡಿ, ಬಸವಣ್ಣನವರು ಸರ್ವರನ್ನು ಪ್ರೀತಿಸುವ ಸಹೃದಯಿಯಾಗಿದ್ದರು. ಹನ್ನೆರಡನೇ ಶತಮಾನದಲ್ಲಿ ಅತ್ಯುತ್ತಮ ಸಾಮಾಜಿಕ ಕಾರ್ಯವನ್ನು ಮಾಡಿದ ಕೀರ್ತಿ ಬಸವಣ್ಣ ಅವರದು. ಮಾನವತಾವಾದಿಯನ್ನು ನಿಂದಿಸುವ ಮೂಲಕ ರವಿ ಹಂಜ್​ ತಮ್ಮ ಅಜ್ಞಾನವನ್ನು ಪ್ರದರ್ಶಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ನಿರ್ದೇಶಕ ಎನ್​.ವಿ.ಈರೇಶ್​, ಶಶಿಧರ ಸ್ವಾಮಿ, ರುದ್ರಮುನಿ, ಗುರುರಾಜ್​, ಧಾರವಾಡ ಗಿರೀಶ್​, ಸುರೇಶ್​, ಶಿವಾನಂದ, ಜಯಣ್ಣ, ನಿರಂಜನ ಅಂಗಡಿ, ಜಗದೀಶ್​ ಇತರರಿದ್ದರು

ಇತಿಹಾಸವನ್ನು ತಿರುಚುವ ಮತ್ತು ಮಹಾಪುರುಷರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಇಂತಹ ಪ್ರವೃತ್ತಿಯನ್ನು ವೀರಶೈವ ಮಹಾಸಭಾ ಎಂದಿಗೂ ಸಹಿಸುವುದಿಲ್ಲ. ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕದಡುವ ಉದ್ದೇಶದಿಂದ ಇಂತಹ ಹೇಳಿಕೆಗಳನ್ನು ನೀಡಲಾಗುತ್ತಿದೆ. ರಾಜ್ಯ ಸರ್ಕಾರ ಹಾಗೂ ಗೃಹ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಲೇಖಕನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು.

> ಮಾತೆ ಶರಣಾಂಬಿಕೆ, ಬಸವಾಶ್ರಮ