ಸಾಗರದ ಎಲ್‌ಬಿ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಏಡ್ಸ್ ಅರಿವು ದಿನಾಚರಣೆಯನ್ನು ಪ್ರಧಾನ ಹಿರಿಯ ವ್ಯವಹಾರ ನ್ಯಾಯಾೀಶ ಎಸ್.ನಟರಾಜ್ ಉದ್ಘಾಟಿಸಿದರು. ಎಂ.ವಿ.ಮಾದೇಶ್, ಡಾ. ಎಚ್.ಎಂ.ಶಿವಕುಮಾರ್, ಸಿ.ಪಿ.ನಾರ್ಂಡಿಸ್ ಇತರರಿದ್ದರು. 
ಶಿವಮೊಗ್ಗ

ಯುವಜನರೇ, ಎಚ್‌ಐವಿಯಿಂದ ಜಾಗೃತರಾಗಿ | HIV Awareness

ಸಾಗರ: ಎಚ್‌ಐವಿ ಸೋಂಕು ಮತ್ತು ಮಾದಕ ವ್ಯಸನದಿಂದ ಯುವ ಸಮೂಹ ಅಂತರ ಕಾಯ್ದುಕೊಳ್ಳಬೇಕು. ಬದುಕನ್ನು ಕಂಗೆಡಿಸುವ ಇಂತಹ ಅನಿಷ್ಟಗಳ ವಿರುದ್ಧ ಎಲ್ಲರೂ ಜಾಗೃತರಾಗಬೇಕು ಎಂದು ಪ್ರಧಾನ ಹಿರಿಯ ವ್ಯವಹಾರ ನ್ಯಾಯಾಧೀಶ ಎಸ್.ನಟರಾಜ್ ಹೇಳಿದರು.
ಸಾಗರದ ಎಲ್‌ಬಿ ಕಾಲೇಜಿನಲ್ಲಿ ಆರೋಗ್ಯ ಇಲಾಖೆ, ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದಿಂದ ಆಯೋಜಿಸಿದ್ದ ವಿಶ್ವ ಏಡ್ಸ್ ಅರಿವು ದಿನವನ್ನು ಉದ್ಘಾಟಿಸಿ ಮಾತನಾಡಿದರು.
ಹೆಚ್ಚಾಗಿ ಯುವ ಸಮೂಹವೇ ಇಂತಹ ಜಾಲದಲ್ಲಿ ಸಿಲುಕುತ್ತಿರುವುದು ಆತಂಕಕಾರಿ. ಮಾದಕ ವಸ್ತುಗಳ ದಾಸರಾದವರಲ್ಲಿ ಬೇರೆಬೇರೆ ಕಾರಣಗಳಿಂದ ಎಚ್‌ಐವಿ ಸೋಂಕು ಕಂಡುಬಂದಿದೆ. ಬದಲಾದ ದಿನಗಳಲ್ಲಿ ಸೋಂಕಿತರ ಪ್ರಮಾಣ ಕಡಿಮೆಯಾಗುತ್ತಿದೆ. ಸೂಕ್ತ ಚಿಕಿತ್ಸೆಯನ್ನೂ ಸಹ ಪಡೆಯಲು ಅವಕಾಶವಿದೆ. ಪಾಲಕರು ನಿಮ್ಮ ಮೇಲೆ ನಿರೀಕ್ಷೆ ಇರಿಸಿಕೊಂಡು ಶಿಕ್ಷಣ ಕೊಡಿಸುತ್ತಾರೆ. ಅವರ ಆಶಯಕ್ಕೆ ತಕ್ಕಂತೆ ಬದುಕಿ, ಉತ್ತಮ ಜೀವನ ನಡೆಸಿ ಎಂದರು.
ಉಪವಿಭಾಗೀಯ ಆಸ್ಪತ್ರೆಯ ಆಪ್ತ ಸಮಾಲೋಚಕ ವಿಭಾಗದ ವಿನೋದ್‌ಕುಮಾರ್ ಮಾತನಾಡಿ, ವಿದ್ಯಾವಂತರೇ ಇಂತಹ ಸೋಂಕಿಗೆ ಒಳಗಾಗುತ್ತಿರುವುದು ದುರದೃಷ್ಟಕರ ಸಂಗತಿ. ಮಾದಕ ದ್ರವ್ಯ ಸೇವಿಸುವವರು, ಸಲಿಂಗಿಗಳಲ್ಲೂ ಈ ಸೋಂಕು ಕಂಡುಬಂದಿದೆ. ಇಂತಹ ಸೋಂಕಿಗೆ ಒಳಗಾದವರು ಮಾನಸಿಕ ಒತ್ತಡದಿಂದ ಬಳಲುತ್ತಾರೆ. ನಿಮ್ಮ ಅಕ್ಕಪಕ್ಕ ಸೋಂಕಿತರು ಇದ್ದರೆ ಅವರಿಗೆ ಚಿಕಿತ್ಸೆ ಪಡೆಯುವಂತೆ ಮನವೊಲಿಸಿ ಎಂದು ಸಲಹೆ ನೀಡಿದರು.
ನ್ಯಾಯಾಧೀಶ ಎಂ.ವಿ.ಮಾದೇಶ್, ಡಾ. ಎಚ್.ಎಂ.ಶಿವಕುಮಾರ್, ಉಪ ತಹಸೀಲ್ದಾರ್ ಸಿ.ಪಿ.ನಾರ್ಂಡಿಸ್, ಡಾ. ಶ್ರೀನಿವಾಸ್, ಚಂದ್ರಶೇಖರ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಬಿ.ಗಿರೀಶ್ ಗೌಡ, ಶೇಖರಪ್ಪ, ಹರ್ಷಿತಾ ಕಾಮತ್, ಅಶೋಕ್, ಡಾ. ಶ್ರೀನಿವಾಸ್ ಡಾ. ನಿರಂಜನಮೂರ್ತಿ ಇತರರಿದ್ದರು.