ಶಿವಮೊಗ್ಗ ತುಂಗಾನಗರ ಠಾಣೆ. 
ಶಿವಮೊಗ್ಗ

ವೃದ್ಧೆ ಕೊಲ್ಲಲು ಯತ್ನಿಸಿದ ಯುವಕ | Attempted murder

ಶಿವಮೊಗ್ಗ: ಟಿಪ್ಪು ನಗರದಲ್ಲಿ ಯುವಕನೊಬ್ಬ ವೃದ್ಧೆ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿ(Attempted murder)ಸಿದ್ದಾನೆ. 62 ವರ್ಷದ ವೃದ್ಧೆ ಹಲ್ಲೆಗೊಳಗಾದವರು. 
ಮಾ.27ರಂದು ಬೆಳಗಿನ ಜಾವ ವೃದ್ಧೆ ಶೌಚಗೃಹ(Toilet)ದಿಂದ ಹೊರಗೆ ಬಂದಾಗ ಹಿಂಬದಿಯಿಂದ ಬಂದ ಯುವಕ ಆಕೆ ಕೈ ಹಿಡಿದುಕೊಂಡಿದ್ದಾನೆ. ವೃದ್ಧೆ ಬಾಯಿ ಮುಚ್ಚಿ ಹಲ್ಲೆ ಮಾಡಿದ್ದಾನೆ. ಪ್ರತಿರೋಧ ವ್ಯಕ್ತಪಡಿಸಿ ಯುವಕನ ಕೈಗೆ ಕಚ್ಚಿದಾಗ ಕೆರಳಿದ ಆತ ವೃದ್ಧೆ(Old woman) ಮುಖಕ್ಕೆ ಗುದ್ದಿದ್ದಾನೆ. 
ಘಟನೆಯಲ್ಲಿ ವೃದ್ಧೆಯ ಎರಡು ಹಲ್ಲುಗಳು ಮುರಿದಿವೆ. ಬಾಯಿ ಮತ್ತು ಮೂಗಿನಿಂದ ತೀವ್ರ ರಕ್ತಸ್ರಾವವಾಗಿದೆ. ಬಳಿಕ ವೃದ್ಧೆಯ ಕುತ್ತಿಗೆ ಹಿಸುಕಿ ಸಾಯಿಸಲು ಯತ್ನಿಸಿದ್ದಾನೆ. ಈ ವೇಳೆ ವೃದ್ಧೆ ಜೋರಾಗಿ ಕೂಗಿದಾಗ ಅಕ್ಕಪಕ್ಕದ ಮನೆಯವರು ಧಾವಿಸಿದ್ದಾರೆ. ಅಷ್ಟರಲ್ಲಿ ಆರೋಪಿ ಪರಾರಿಯಾಗಿದ್ದಾನೆ. ತುಂಗಾನಗರ ಠಾಣೆ(Tunganagar Station)ಯಲ್ಲಿ ಪ್ರಕರಣ ದಾಖಲಾಗಿದೆ.