ಶಿವಮೊಗ್ಗ ಸೈಬರ್ ಠಾಣೆ. 
ಶಿವಮೊಗ್ಗ

ಸಾಲ ಕೊಡಿಸುವುದಾಗಿ ನಂಬಿಸಿ ಯುವಕನಿಗೆ 4.71 ಲಕ್ಷ ರೂ. ಧೋಖಾ | Online fraud

ಪ್ರಮುಖ ಮುಖ್ಯಾಂಶಗಳು

  • ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮದಡಿ ಸಾಲ
  • ಫೇಸ್‌ಬುಕ್ ನೋಡುತ್ತಿದ್ದಾಗ ಯುವಕನಿಗೆ ಬಂದಿತ್ತು ಮಾಹಿತಿ
  • ಸ್ನೇಹಿತ, ಅತ್ತಿಗೆಯಿಂದಲೂ ಹಣ ಪಡೆದು ವರ್ಗಾವಣೆ ಮಾಡಿದ್ದ ಯುವಕ
ಶಿವಮೊಗ್ಗ: ಪ್ರಧಾನಮಂತ್ರಿ(Prime Minister) ಉದ್ಯೋಗ ಸೃಷ್ಟಿ ಕಾರ್ಯಕ್ರಮದಡಿ ಸಾಲ ಕೊಡಿಸುವುದಾಗಿ ನಂಬಿಸಿ 28 ವರ್ಷದ ಯುವಕನಿಗೆ 4.71 ಲಕ್ಷ ರೂ. ಆನ್‌ಲೈನ್ ಮೂಲಕ ವಂಚಿಸಲಾಗಿದೆ.
ಏ.14ರಂದು ಮೊಬೈಲ್‌ನಲ್ಲಿ ಫೇಸ್‌ಬುಕ್ ನೋಡುತ್ತಿದ್ದಾಗ ಯುವಕನಿಗೆ ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ(Job creation) ಕಾರ್ಯಕ್ರಮದಡಿ ಸಾಲ ನೀಡುವ ಬಗ್ಗೆ ಮಾಹಿತಿ ಬಂದಿತ್ತು. ಆ ವಿಡಿಯೋದಲ್ಲಿದ್ದ ನಂಬರ್‌ಗೆ ಕರೆ ಮಾಡಿ 50 ಲಕ್ಷ ರೂ. ಸಾಲ ಬೇಕೆಂದು ಕೇಳಿದಾಗ ಆಧಾರ್, ಪಾನ್ ಕಾರ್ಡ್, ಪಾಸ್‌ಬುಕ್, ಫೋಟೋವನ್ನು ವಾಟ್ಸ್‌ಆ್ಯಪ್ ನಂಬರ್‌ಗೆ ವಂಚಕ ಹಾಕಿಸಿಕೊಂಡಿದ್ದ. 
ಮರುದಿನ(ಏ.15) ಯುವಕನ ಮೊಬೈಲ್‌ಗೆ ಕರೆ ಮಾಡಿದ್ದ ವಂಚಕ ಅರ್ಜಿ ಭರ್ತಿ ಮಾಡಿ ಸಹಿ ಮಾಡಿ ಕಳುಹಿಸುವಂತೆ ಹೇಳಿದ್ದ. ಲೋನ್(Loan) ಬಿಡುಗಡೆ ಮಾಡಲು ವಿಮೆ, 3 ತಿಂಗಳ ಇಎಂಐ, ಶೇ.3ರಷ್ಟು ಕಮೀಷನ್, ತೆರಿಗೆ ಕಟ್ಟಬೇಕೆಂದು ಹೇಳಿದ್ದ. ಆತನ ಮಾತು ನಂಬಿದ ಯುವಕ, ತನ್ನ ಸ್ನೇಹಿತ ಮತ್ತು ಅತ್ತಿಗೆ ಅವರಿಂದಲೂ ಹಣ ಪಡೆದು ಒಟ್ಟಾರೆ 4,71,837 ರೂ. ವರ್ಗಾವಣೆ ಮಾಡಿದ್ದ ವಂಚನೆಗೆ ಒಳಗಾಗಿದ್ದಾರೆ. ಈ ಬಗ್ಗೆ ಯುವಕ ಸೈಬರ್ ಠಾಣೆಗೆ ದೂರು ನೀಡಿದ್ದಾರೆ.