ಸಾಗರದ ಕುಡುಪಲಿ ಸ್ವರಾಲಯ ಸಭಾಂಗಣದಲ್ಲಿ ಆಯೋಜಿಸಿದ್ದ ನೃತ್ಯೋತ್ಸವದಲ್ಲಿ ಕಲಾವಿದರು ನತ್ಯ ಪ್ರದರ್ಶಿಸಿದರು.
- ಪರಿಣಿತಿ ಯುವ ನೃತ್ಯೋತ್ಸವ ಉದ್ಘಾಟನೆ
- ಯುವ ಕಲಾವಿದರಿಗೆ ಪ್ರೋತ್ಸಾಹ ಅಗತ್ಯ
ಸಾಗರ: ಮಲೆನಾಡಿನ ಸಾಗರ ಸ್ಥಳವು ಕಲೆ ಮತ್ತು ಸಾಂಸತಿಕ ಚಟುವಟಿಕೆಗಳಿಗೆ ಪ್ರಖ್ಯಾತವಾಗಿದೆ. ಸಾಂಸತಿಕ ಕಾರ್ಯಕ್ರಮಗಳಲ್ಲಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ಹಿರಿಯ ರಂಗಕರ್ಮಿ ಎಂ.ಪಿ.ಲಕ್ಷಿ ನಾರಾಯಣ ಹೇಳಿದರು.
ಸಾಗರ ಪಟ್ಟಣದ ಕುಡುಪಲಿ ಸ್ವರಾಲಯ ಸಭಾಂಗಣದಲ್ಲಿ ಆಯೋಜಿಸಿದ್ದ ಪರಿಣಿತಿ ಯುವ ನೃತ್ಯೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಾಗರದ ಸಾಂಸತಿಕ ಚಟುವಟಿಕೆಗಳಿಗೆ ಸ್ವರಾಲಯ ಸಭಾಂಗಣ ಸದಾ ಮುಕ್ತವಾಗಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಯುವ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆ ಎಂದರು.
ನಗರಸಭೆಯ ಮಾಜಿ ಅಧ್ಯ ಟಿ.ಡಿ.ಮೇರಾಜ್ ಮಾತನಾಡಿ, ಸಾಂಸತಿಕ ಪರಂಪರೆ ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಸಾಂಸತಿಕ ಕಾರ್ಯಕ್ರಮಗಳು ಮನೋರಂಜನೆಗಾಗಿ ಮಾತ್ರ ಇರುವುದಿಲ್ಲ. ಅದು ಮನುಷ್ಯ ಬದುಕಿಗೆ ಶಿಸ್ತನ್ನು ಕಲಿಸುತ್ತದೆ ಎಂದರು.
ಪರಿಣಿತಿ ರಾಷ್ಟ್ರೀಯ ನೃತ್ಯೋತ್ಸವ ಸಮಿತಿ ಅಧ್ಯ ಅರುಣ್ಕುಮಾರ್ ಮಾತನಾಡಿ, ಪರಿಣಿತಿ ರಾಷ್ಟ್ರೀಯ ನೃತ್ಯೋತ್ಸವವು 12ನೇ ವರ್ಷ ಪೂರೈಸಿದೆ. ಇಂತಹ ಉತ್ಸವಗಳು ಕಲೆ ಮತ್ತು ಕಲಾವಿದರ ಪರಸ್ಪರ ಸಂವಹನಕ್ಕೆ ಅನುಕೂಲವಾಗುತ್ತದೆ ಎಂದರು. ಪರಿಣಿತಿ ಕಲಾಕೇಂದ್ರದ ಮುಖ್ಯಸ್ಥ ವಿದ್ವಾನ್ ಗೋಪಾಲ್, ಎಸ್.ಆರ್.ರತ್, ಶಿಲ್ಪಾ ಸಂದೀಪ್ ಇತರರಿದ್ದರು.