ನಗರ ಚಿಕ್ಕಪೇಟೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ ಮಹಬಲೇಶ್ವರ ಭಟ್ ಅವರನ್ನು ಸನ್ಮಾನಿಸಲಾಯಿತು. ಎನ್.ವೈ.ಸುರೇಶ್, ಕೆ.ಎಸ್.ಶರಣ್ಯಾ, ದೇವರಾಜ ಇತರರಿದ್ದರು. 
ಶಿವಮೊಗ್ಗ

ಯಕ್ಷಗಾನದಲ್ಲಿ ಹೊಸದರ ಕಲಿಕೆ ಅಗತ್ಯ | Felicitation

ಶಿವಕುಮಾರ ಎಸ್.ಪಿ.
ಹೊಸನಗರ: ಯಕ್ಷಗಾನದಲ್ಲಿ ಕಲಿಕೆಗೆ ಅಂತ್ಯವೆಂಬುದೇ ಇಲ್ಲ. ಪ್ರತಿದಿನವೂ ಹೊಸದನ್ನು ಕಲಿಯುವುದು ಇರುತ್ತದೆ ಎಂದು ಯಕ್ಷಗಾನ ಹಾಸ್ಯ ಕಲಾವಿದ ಕ್ಯಾದಗಿ ಮಹಬಲೇಶ್ವರ ಭಟ್ ಅಭಿಪ್ರಾಯಪಟ್ಟರು.
ತಾಲೂಕಿನ ನಗರ ಚಿಕ್ಕಪೇಟೆ ಶಿವಪ್ಪನಾಯಕ ಸಹಕಾರ ಸಂಘದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಯಕ್ಷಗಾನದ ಆಳ-ಆಗಲ ಅಳೆಯಲಾಗದು. ಹಿಂದೆ, ಇಂದು ಮತ್ತು ಮುಂದೆ ನೋಡಗರ ದೃಷ್ಟಿಯಲ್ಲಿ ಬದಲಾವಣೆ ಇರುತ್ತದೆ. ಪ್ರತಿದಿನ, ಪ್ರತಿಕ್ಷಣ ಹೊಸತನ ಬಯಸುವ ಪ್ರೇಕ್ಷಕರು ಇದ್ದಾರೆ. ಅದನ್ನು ಗಮನದಲ್ಲಿಟ್ಟು ನೋಡಿದರೆ ಯಕ್ಷಗಾನದಲ್ಲಿ ಪ್ರತಿದಿನವೂ ಕಲಿಯಬೇಕಿದೆ ಎಂದರು.
ಯಕ್ಷಗಾನದಲ್ಲಿ ಪ್ರಚಲಿತವಾಗಿ ಸಾಮಾಜಿಕ ಪ್ರಸಂಗಗಳು ಹೊರಬರುತ್ತಿವೆ. ಕಾಲಕ್ಕೆ ಸರಿಯಾಗಿ ಯಕ್ಷಗಾನವೂ ಬದಲಾಗುತ್ತಿದೆ. ಅದಕ್ಕೆ ಪೂರಕವಾಗಿ ಕಲಾವಿದರು ಬದಲಾಗುವುದು ಅನಿವಾರ್ಯ. ಆದರೆ ಪೌರಾಣಿಕ ಪ್ರಸಂಗದ ಗತ್ತೇ ಬೇರೆ. ಯಕ್ಷಗಾನ ಇರುವವರೆಗೂ ಪೌರಾಣಿಕ ಕತೆಗಳು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತವೆ ಎಂದು ತಿಳಿಸಿದರು.
ಸಾಗರದಲ್ಲಿ ಮಾ.5ರಂದು ಗದಾಯುದ್ಧ, ಸುಧನ್ವಾರ್ಜುನ, ಜಾಂಬವತಿ ಕಲ್ಯಾಣ ಯಕ್ಷಗಾನವಿದೆ. ಮೇರು ಕಲಾವಿದ ಗೋಡೆ ನಾರಾಯಣ ಹೆಗಡೆ ಅವರ ಕೌರವ, ಪ್ರಥಮ ಬಾರಿಗೆ ತೀರ್ಥಹಳ್ಳಿ ಗೋಪಾಲಾಚಾರ್ಯರ ಭೀಮ, ವಿದ್ವಾನ್ ದತ್ತಮೂರ್ತಿ ಭಟ್ ಅವರ ಅಶ್ವತ್ಥಾಮ, ಮಂಕಿ ಮತ್ತು ಶೆಟ್ಟಿಗಾರರ ಸುಧನ್ವ, ಅರ್ಜುನ ಪಾತ್ರ ಮೂಡಿ ಬರಲಿದೆ ಎಂದರು.
ಶಿವಪ್ಪನಾಯಕ ಸಹಕಾರ ಸಂಘದ ಅಧ್ಯಕ್ಷ ಎನ್.ವೈ.ಸುರೇಶ್, ಸಿಇಒ ಕೆ.ಎಸ್.ಶರಣ್ಯಾ, ನಿರ್ದೇಶಕ ದೇವರಾಜ, ಭೂಮಿಕಾ ನಾಗೇಂದ್ರ ಇದ್ದರು.