ಸಹ್ಯಾದ್ರಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಂವಾದ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು ನಾಗಲಕ್ಷ್ಮೀ ಚೌಧರಿ ಉದ್ಘಾಟಿಸಿದರು. ಡಾ. ಸಿರಾಜ್ ಅಹಮ್ಮದ್, ಸರೋಜಾ ಪಿ.ಚೆಂಗೊಳ್ಳಿ, ಡಾ. ಎನ್.ರಾಜೇಶ್ವರಿ, ಡಾ. ಎಂ.ಹಾಲಮ್ಮ ಇತರರಿದ್ದರು. 
ಶಿವಮೊಗ್ಗ

ಮಹಿಳೆಯರು ರಾಜಕೀಯ ಕ್ಷೇತ್ರಕ್ಕೆ ಬರಬೇಕು| Women's Commission

ಪ್ರಮುಖ ಮುಖ್ಯಾಂಶಗಳು

  • ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಆಶಯ
  • ಸಂವಾದ, ಕಾನೂನು ಅರಿವು ಕಾರ್ಯಕ್ರಮ
  • ರಾಜಕಾರಣ ಎನ್ನುವುದು ಪ್ರಗತಿಯ ಕೀಲಿ ಕೈ

ಶಿವಮೊಗ್ಗ: ಬದಲಾವಣೆಗಾಗಿ ಮಹಿಳೆಯರು ರಾಜಕೀಯ (politics) ಪ್ರವೇಶ ಮಾಡಬೇಕಿರುವುದು ಅನಿವಾರ್ಯ. ರಾಜಕೀಯದ ಮೂಲಕ ಮಹಿಳೆಯರು ಉತ್ತಮ ಆಡಳಿತ (administration) ನೀಡಬಹುದು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅಭಿಪ್ರಾಯಪಟ್ಟರು.

ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಸೋಮವಾರ (monday) ಸಂವಾದ ಹಾಗೂ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜಕಾರಣ ಎನ್ನುವುದು ಪ್ರಗತಿಯ ಕೀಲಿ ಕೈ. ಬದುಕು ಎಂಬುದು ಹೆಣ್ಣಿನ ಪಾಲಿಗೆ ಅವಮಾನ, ಸೋಲು, ನಿರಾಶೆ, ಶೋಷಣೆ ಎಲ್ಲವನ್ನೂ ನೀಡಿದೆ. ಇವುಗಳಿಂದ ಪಾರಾಗಬೇಕಾದರೆ ಶಿಕ್ಷಣ (education) ಅವಶ್ಯ. ಶಿಕ್ಷಣದಿಂದ ಮಾತ್ರ ಹೆಣ್ಣು ಪ್ರಗತಿ ಕಾಣಬಹುದು ಎಂದು ತಿಳಿಸಿದರು.

ಹೆಣ್ಣಿನ ಜೀವನ ಅತ್ಯಂತ ಕಷ್ಟಕರ. ತನಗಾಗುವ ಅವಮಾನ, ನೋವುಗಳ ವಿರುದ್ಧವೂ ಧ್ವನಿ ಎತ್ತಬೇಕು. ಶೋಷಣೆ ಎನ್ನುವುದು ಜಾತಿ, ಧರ್ಮಗಳನ್ನೂ ಮೀರಿದ್ದು. ಹೆಣ್ಣು ಕಲಿತರೆ ಮಾತ್ರ ಸಾಲದು, ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಯಾವ ಧರ್ಮಗಳೂ ಹೆಣ್ಣಿಗೆ ಮಾನ್ಯತೆ ನೀಡಿಲ್ಲ. ಹೆಣ್ಣಿನ ಶೋಷಣೆ, ಅತ್ಯಾಚಾರ, ಅನಾಚಾರ ಎಲ್ಲ ಧರ್ಮಗಳಲ್ಲೂ ಇವೆ. ಶಿಕ್ಷಕರಿಂದಲೇ ಲೈಂಗಿಕ ಶೋಷಣೆಯಾಗುತ್ತಿದೆ ಎಂದು ಕಂಡುಬಂದರೆ ಹೆದರದೆ ದೂರು ನೀಡಬೇಕು ಎಂದು ತಿಳಿಸಿದರು.

ಪ್ರಾಚಾರ್ಯ ಡಾ. ಸಿರಾಜ್ ಅಹಮ್ಮದ್, ವಿಜ್ಞಾನ ಕಾಲೇಜಿನ ಪ್ರಾಚಾರ್ಯೆ ಡಾ. ಎನ್.ರಾಜೇಶ್ವರಿ, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಕೆ.ಎನ್.ಮಂಜುನಾಥ್, ಐಕ್ಯೂಎಸಿ ಸಂಚಾಲಕ ಪ್ರೊ. ಜಿ.ಕೃಷ್ಣಮೂರ್ತಿ, ಡಾ. ಎಚ್.ಪಿ.ಮಂಜುನಾಥ್, ಕಾಲೇಜಿನ ಮಹಿಳಾ ಸಬಲೀಕರಣ ಘಟಕದ ಸಂಚಾಲಕಿ ಡಾ. ಎಂ.ಹಾಲಮ್ಮ, ಡಾ. ಕೆ.ಎನ್. ಮಹಾದೇವಸ್ವಾಮಿ ಇತರರಿದ್ದರು.