ಹಿಂದುಳಿದ ಜನ ಜಾಗೃತಿ ವೇದಿಕೆ ಮಹಿಳಾ ಘಟಕದಿಂದ ಸೋಮವಾರ ನಗರದಲ್ಲಿ ಏರ್ಪಡಿಸಿದ್ದ ಮಹಿಳಾ ದಿನಾಚರಣೆಯನ್ನು ಜಿ.ಪಲ್ಲವಿ ಉದ್ಘಾಟಿಸಿದರು. ಎಸ್.ವಿ.ರಾಜಮ್ಮ, ಯಶೋಧಾ ಕರಿಯಪ್ಪ, ನಂದಾ, ಸುಗುಣಾ ಸತೀಶ್, ಸಿ.ಮಂಜುಳಾ, ಸರೋಜ ಪಿ.ಚಂಗೊಳ್ಳಿ, ವರಲಕ್ಷ್ಮೀ ಪ್ರಕಾಶ್ ಮುಂತಾದವರಿದ್ದರು.
- ಎಸ್‌ಸಿ, ಎಸ್‌ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಅಭಿಪ್ರಾಯ
- ಮಹಿಳಾ ದಿನಾಚರಣೆ ಎನ್ನುವುದು ಹೆಣ್ಣು ಮಕ್ಕಳಿಗೆ ಹಬ್ಬದ ರೀತಿ
- ಹಿಂದುಳಿದ ಜನ ಜಾಗೃತಿ ವೇದಿಕೆಯಿಂದ ಮಹಿಳಾ ದಿನಾಚರಣೆ ಉದ್ಘಾಟನೆ
ಶಿವಮೊಗ್ಗ: ಹೆಣ್ಣಿಗೆ ಧರ್ಮ, ಜಾತಿ (caste) ಎಂಬುದಿಲ್ಲ. ಆದರೆ ವ್ಯವಸ್ಥೆಯೊಳಗಡೆ ಜಾತಿ, ಧರ್ಮ (religion)ದ ಹೆಸರಿನಲ್ಲಿ ಹೆಣ್ಣನ್ನು ಅವಕಾಶ ವಂಚಿತೆಯನ್ನಾಗಿ ಮಾಡಲಾಗುತ್ತಿದೆ ಎಂದು ರಾಜ್ಯ (state) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಅಭಿಪ್ರಾಯಪಟ್ಟರು.
ಹಿಂದುಳಿದ ಜನ ಜಾಗೃತಿ ವೇದಿಕೆ ಮಹಿಳಾ ಘಟಕದಿಂದ ಸೋಮವಾರ ನಗರದಲ್ಲಿ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ನಾನು ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದೇನೆ. ಅದರ ಆಧಾರದ ಮೇಲೆ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಎರಡು ಬಾರಿ ಪ್ರಯತ್ನಿಸಿದೆ. ನಾನು ಅಲ್ಪಸಂಖ್ಯಾತ ಅಲೆಮಾರಿ ಸಮುದಾ ಯದವಳು ಎಂಬ ಕಾರಣಕ್ಕೆ ಟಿಕೆಟ್ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಹಿಳಾ ದಿನಾಚರಣೆ ಎನ್ನುವುದು ಹೆಣ್ಣು ಮಕ್ಕಳಿಗೆ ಹಬ್ಬದ ರೀತಿ. ಈ ದಿನ ಅಸ್ತಿತ್ವಕ್ಕೆ ಬರಲು ಮಹಿಳೆಯರ ವಿರೋಚಿತ ಹೋರಾಟದ ಹಿನ್ನೆಲೆಯಿದೆ. 90 ವರ್ಷಗಳ ಹಿಂದೆ ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ಮಹಿಳೆಯರು ಕನಿಷ್ಟ ವೇತನ ಸೇರಿದಂತೆ ಸಮಾನ ಅವಕಾಶಗಳಿಗಾಗಿ ನಡೆಸಿದ ಹೋರಾಟದ ಪರಿಣಾಮವಾಗಿ ಮಹಿಳಾ ದಿನಾಚರಣೆ ಅಸ್ತಿತ್ವಕ್ಕೆ ಬಂದಿದೆ ಎಂದರು.
ಮಹಿಳಾ ಸಮಾನತೆ ವಿಚಾರದಲ್ಲಿ 12ನೇ ಶತಮಾನದ ವಚನ ಚಳವಳಿ ಮರೆಯುವಂತಿಲ್ಲ. ಮಹಿಳೆಯರಿಗೂ ಸಮಾನ ಅವಕಾಶಗಳು ಸಿಗಬೇಕು ಎಂದು ಪ್ರತಿಪಾದಿಸಿದ್ದ ಬಸವಣ್ಣನವರ ಆದರ್ಶಗಳನ್ನು ಜಾರಿಗೆ ತರಬೇಕಾದರೆ ಕಾನೂನು ಇನ್ನಷ್ಟು ಪ್ರಬಲವಾಗಬೇಕೆಂದರು.
ಹಿಂದುಳಿದ ಜನ ಜಾಗೃತಿ ವೇದಿಕೆ ಮಹಿಳಾ ಘಟಕದ ಸಂಚಾಲಕಿ ಎಸ್.ವಿ.ರಾಜಮ್ಮ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸಿ.ಮಂಜುಳಾ, ಸಹ್ಯಾದ್ರಿ ಮಹಿಳಾ ಸಹಕಾರ ಬ್ಯಾಂಕ್ ಅಧ್ಯಕ್ಷೆ ವೀರಮ್ಮ, ಎಪಿಸಿಆರ್ ಶಿವಮೊಗ್ಗ ಜಿಲ್ಲಾಧ್ಯಕ್ಷೆ ಸರೋಜ ಪಿ.ಚಂಗೊಳ್ಳಿ, ವಾರ್ತಾ ವಾಚಕಿ ಸುಗುಣಾ ಸತೀಶ್, ನಿವೃತ್ತ ಶಿಕ್ಷಕಿ ಯಶೋಧಾ ಕರಿಯಪ್ಪ, ಲೇಖಕಿ ನಂದಾ, ವಕೀಲರಾದ ಶೈನಿ ಮೇರಿ, ಪ್ರಮುಖರಾದ ವರಲಕ್ಷ್ಮೀ ಪ್ರಕಾಶ್ ಇದ್ದರು. ರಾಷ್ಟ್ರಪತಿಗಳ ಪದಕಕ್ಕೆ ಪಾತ್ರರಾದ ಪೊಲೀಸ್ ಇನ್‌ಸ್ಪೆಕ್ಟರ್ ಎಚ್.ಕೆ.ಶಕುಂತಲಾ ಅವರನ್ನು ಸನ್ಮಾನಿಸಲಾಯಿತು.