ಭದ್ರಾವತಿಯಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆಯನ್ನು ಸಮಾಜದ ಅಧ್ಯಕ್ಷ ಗಂಗಾಧರನ್ ಉದ್ಘಾಟಿಸಿದರು. ಶೋಭಾ, ವಿಜಯಲಕ್ಷ್ಮೀ, ವಾಸಂತಿ ಇತರರಿದ್ದರು.
ಭದ್ರಾವತಿ: ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಹಾದಿಯಲ್ಲಿ ಮುನ್ನಡೆಯುತ್ತ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ ಎಂದು ನಗರದ ಕೇರಳ ಸಮಾಜಂ ಅಧ್ಯಕ್ಷ ಗಂಗಾಧರನ್ ಹೇಳಿದರು.
ನ್ಯೂಟೌನ್ ಶ್ರೀ ಅಯ್ಯಪ್ಪ ಸೇವಾ ಸಮಿತಿ ಸಭಾಭವನದಲ್ಲಿ ನಗರದ ಕೇರಳ ಸಮಾಜಂ ಮಹಿಳಾ ಘಟಕದಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿ, ಮಹಿಳೆಯರು ದುಡಿಯುವ ಜತೆಯಲ್ಲಿ ಕುಟುಂಬದ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದರು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಮಾಜದ ಅಧ್ಯಕ್ಷೆ ಶೋಭಾ ಬಾಲಚಂದ್ರನ್, ಸುರಭಿ ವ್ಯಸನಮುಕ್ತ ಕೇಂದ್ರದ ನಿರ್ದೇಶಕಿ ವಿ.ವಿ.ಲತಾ, ಹಿರಿಯ ಪೌರ ಕಾರ್ಮಿಕರಾದ ಸುಶೀಲಮ್ಮ, ಸಮಾಜದ ಪ್ರಧಾನ ಕಾರ್ಯದರ್ಶಿ ವಿಜಯಲಕ್ಷ್ಮೀ, ವಾಸಂತಿ, ಕಲ್ಯಾಣಿ ಶಶಿಧರನ್, ಯಶೋದಾ, ಎಸ್.ವಿಜಯಲಕ್ಷ್ಮೀ, ಸೀತಾಲಕ್ಷ್ಮೀ ಇತರರಿದ್ದರು.