ಶಿವಮೊಗ್ಗ ತುಂಗಾನಗರ ಠಾಣೆ  
ಶಿವಮೊಗ್ಗ

ಕ್ಯಾಟರಿಂಗ್ ಕೆಲಸಕ್ಕೆ ಬಂದಿದ್ದ ಮಹಿಳೆ ವಿದ್ಯುತ್ ಸ್ಪರ್ಶದಿಂದ ಸಾವು | Electric shock

ಪ್ರಮುಖ ಮುಖ್ಯಾಂಶಗಳು

  • ಗಾಜನೂರು ಸಮೀಪದ ಖಾಸಗಿ ರೇಸಾರ್ಟ್‌ನಲ್ಲಿ ಘಟನೆ
  • ನಿಶ್ಚಿತಾರ್ಥ ಕಾರ್ಯಕ್ರಮದ ಕ್ಯಾಟರಿಂಗ್ ಗೆ ಬಂದಿದ್ದ ಮಹಿಳೆ
  • ತಾಲೂಕಿನ ಅಬ್ಬಲಗೆರೆ ಗ್ರಾಮದ ನಾಗಮ್ಮ ಮೃತ ದುರ್ದೈವಿ
ಶಿವಮೊಗ್ಗ: ನಗರದ ಹೊರವಲಯದ ಗಾಜನೂರು ಸಮೀಪದ ಖಾಸಗಿ ರೇಸಾರ್ಟ್‌(Resort)ವೊಂದರಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮದ ಕ್ಯಾಟರಿಂಗ್(Catering) ಕೆಲಸಕ್ಕೆ ಬಂದಿದ್ದ ಮಹಿಳೆಯೊಬ್ಬರು ಸೋಮವಾರ ಮಧ್ಯಾಹ್ನ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ.
ತಾಲೂಕಿನ ಅಬ್ಬಲಗೆರೆ ಗ್ರಾಮದ ನಾಗಮ್ಮ (45) ಮೃತ ದುರ್ದೈವಿ. ತೀರ್ಥಹಳ್ಳಿ ರಸ್ತೆಯ  ರೇಸಾರ್ಟ್‌ನಲ್ಲಿ ನಿಶ್ಚಿತಾರ್ಥ(Engagement) ಕಾರ್ಯಕ್ರಮ ನಡೆದಿತ್ತು. ಆ ಕಾರ್ಯಕ್ರಮಕ್ಕೆ ಊಟಕೆ ಕ್ಯಾಟರಿಂಗ್ ವ್ಯವಸ್ಥೆ ಮಾಡಿದ್ದು, ಪಾತ್ರೆ ತೊಳೆಯಲು ನಾಗಮ್ಮ ಕೂಡ ತೆರಳಿದ್ದರು. ಮಧ್ಯಾಹ್ನ ವಿದ್ಯುತ್ ದೀಪಾಲಂಕಾರಕ್ಕೆ ಶಾರ್ಟ್ ಜೋಮರ್‌ಗಳನ್ನು ರೇಸಾರ್ಟ್ ಮುಳ್ಳುತಂತಿ ಬೇಲಿಗೆ ಅಳವಡಿಕೆ ಮಾಡಿದ್ದು, ಬೇಲಿ ಮೇಲೆ ಬಟ್ಟೆ ಒಣಗಲು ಹಾಕುವಾಗ ವಿದ್ಯುತ್ ಸ್ಪರ್ಶಗೊಂಡಿದೆ. 
ವಿದ್ಯುತ್ ಶಾಕ್‌(Electric shock)ನಿಂದ ಗಂಭೀರವಾಗಿ ಅಸ್ವಸ್ಥಗೊಂಡಿದ್ದ ನಾಗಮ್ಮ ಅವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ತುಂಗಾನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.