ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆ
ಶಿವಮೊಗ್ಗ: ಮನೆಯಲ್ಲೇ ಕುಳಿತು ಕೆಲಸ ಮಾಡುವುದಕ್ಕೆ ಅವಕಾಶವಿದೆ ಎಂಬ ಜಾಹೀರಾತು(Advertisement)ನಂಬಿದ್ದ ಶಿವಮೊಗ್ಗದ ಮಹಿಳೆಯೊಬ್ಬರು ಕೇವಲ 10 ದಿನದಲ್ಲಿ 11.46 ಲಕ್ಷ ರೂ. ಕಳೆದುಕೊಂಡಿದ್ದಾರೆ.
ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ ಸಂಸ್ಥೆಯಲ್ಲಿ ವರ್ಕ್ ಫ್ರಂ ಹೋಮ್(Work from home) ಅವಕಾಶವಿದ್ದು, ವಿವಿಧ ಟಾಸ್ಕ್ ಪೂರೈಸಿದರೆ ಅತ್ಯಧಿಕ ಲಾಭ ಗಳಿಸಬಹುದು ಎಂದು ನಂಬಿ ಮಹಿಳೆಯೊಬ್ಬರಿಗೆ ವಂಚಿಸಲಾಗಿದೆ.
ಮಹಿಳೆ ಇನ್‌ಸ್ಟಾಗ್ರಾಂ(Instagram) ವಿಕ್ಷಿಸುತ್ತಿದ್ದಾಗ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ವರ್ಕ್ ಫ್ರಂ ಹೋಮ್ ಅವಕಾಶವಿದೆ ಎಂಬ ಜಾಹೀರಾತು ಗಮನಿಸಿದ್ದರು. ಅದನ್ನು ಕ್ಲಿಕ್ ಮಾಡಿದಾಗ ವಿವಿಧ ಟಾಸ್ಕ್ ಪೂರೈಸಿ ಲಾಭ ಗಳಿಸಬಹುದೆಂದು ತಿಳಿಸಲಾಗಿತ್ತು. ನಂಬಿದ ಮಹಿಳೆ ಹಣ ಪಾವತಿಸಿ ವಿವಿಧ ಟಾಸ್ಕ್ ಪೂರೈಸಿದ್ದಾರೆ. ಹತ್ತು ದಿನದಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ಹೂಡಿಕೆ ಮಾಡಿದ್ದರು.
ಬಳಿಕ ಹೂಡಿಕೆ ಮತ್ತು ಲಾಭಾಂಶದ ಹಣವನ್ನು ಮಹಿಳೆ ವಾಪಸ್ ಕೇಳಿದ್ದರು. ಟಾಸ್ಕ್ ನೀಡಿದ್ದವರು, ತಾವು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಮತ್ತಷ್ಟು ಹಣ ವರ್ಗಾಯಿಸಿದರೆ ನಿಮ್ಮ ಹಣ ಹಿಂತಿರುಗಲಿದೆ ಎಂದಿದ್ದರು. ಇದರಿಂದ ಅನುಮಾನಗೊಂಡ ಮಹಿಳೆ ಬೇರೆಯವರನ್ನು ವಿಚಾರಿಸಿದಾಗ ವಂಚನೆಗೊಳಗಾಗಿರುವುದು ಗೊತ್ತಾಗಿದ್ದು, ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.