ರಿಪ್ಪನ್ಪೇಟೆಯ ಗುಡ್ ಶೇಪರ್ಡ್ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಜಲತ ಚಕ್ರವಾಕ ಸುಬ್ರಹ್ಮಣ್ಯ ಮಾತನಾಡಿದರು. ಫಾತಿಮಾ, ಶಿಲ್ಪಾ, ಸಂತೋಷ್ ಇತರರಿದ್ದರು.
- ಪರಿಸರ ಜಾಗೃತಿ ಕಾರ್ಯಕ್ರಮ
- ಜಲತಜ್ಞ ಚಕ್ರವಾಕ ಸುಬ್ರಹ್ಮಣ್ಯ ಆತಂಕ
- ಮಾರಕ ಯೋಜನೆಗಳಿಂದ ಪಶ್ಚಿಮಘಟ್ಟಕ್ಕೆ ಧಕ್ಕೆ
ರಿಪ್ಪನ್ಪೇಟೆ: ಪರಿಸರಕ್ಕೆ ಮಾರಕವಾಗುವ ಯೋಜನೆಗಳ ಅನುಷ್ಠಾನದಿಂದ ಜೀವವೈವಿಧ್ಯಗಳ ತಾಣ ಪಶ್ಚಿಮ ಘಟ್ಟಕ್ಕೆ ಧಕ್ಕೆಯಾಗಲಿದೆ ಎಂದು ಜಲತಜ್ಞ ಚಕ್ರವಾಕ ಸುಬ್ರಹ್ಮಣ್ಯ ಆತಂಕ ವ್ಯಕ್ತಪಡಿಸಿದರು.
ಪಟ್ಟಣದ ಗುಡ್ ಶೆಫರ್ಡ್ ಪ್ರೌಢಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ದೇಶದ ಜನಸಂಖ್ಯೆ ವೇಗವಾಗಿ ಬೆಳೆದ ಕಾರಣ ನೈಸರ್ಗಿಕ ಸಂಪನ್ಮೂಲಗಳು ದಿನದಿಂದ ದಿನಕ್ಕೆ ನಶಿಸುತ್ತಿವೆ ಎಂದರು.
ಅತ್ಯಂತ ಸೂ$್ಮ ಪ್ರದೇಶವಾದ ಪಶ್ಚಿಮಟ್ಟಗಳ ಮಳೆಕಾಡುಗಳ ಮೇಲೆ ಅಭಿವೃದ್ಧಿ ಹೆಸರಿನಲ್ಲಿ ಯೋಜನೆಗಳ ಹೆಚ್ಚು ಅನುಷ್ಠಾನದಿಂದ ಎಲ್ಲ ವನ್ಯಜಿವಿಗಳ ಸಂಚಾರಕ್ಕೆ ತೊಂದರೆ ಆಗುತ್ತಿದೆ. ರಸ್ತೆ ಅಗಲೀಕರಣ, ಸುರಂಗ ಮಾರ್ಗ, ರೈಲ್ವೆ ಮಾರ್ಗಗಳು, ಅಣೆಕಟ್ಟುಗಳ ನಿರ್ಮಾಣದಿಂದ ಸಾಕಷ್ಟು ನೈಸರ್ಗಿಕ ಕಾಡನ್ನು ಕಳೆದುಕೊಂಡಾಗಿದೆ. ಜತೆಗೆ ಜೀವವೈವಿಧ್ಯ ನಾಶವಾಗಿದೆ. ಕೆಲವೊಂದು ವಿನಾಶದ ಅಂಚಿಗೆ ತಲುಪಿದೆ. ಅಳಿದುಳಿದ ಕಾಡಿನಲ್ಲಿ ಒಂದಷ್ಟು ಜೀವಿಗಳು ಜೀವನ ನಿರ್ವಹಣೆ ಮಾಡುತ್ತಿವೆ. ಇನ್ಮುಂದೆ ಹೊಸ ಯೋಜನೆಗಳು ಅನುಷ್ಠಾನವಾದರೆ ಪಶ್ಚಿಮ ಟ್ಟದಲ್ಲಿ ಕುಡಿಯುವ ನೀರು ಸಹ ಸಿಗಲಾರದು ಎಂದರು.
ಚೀನಾ ದೇಶ ಇಂತಹ ಪರಿಸರ ಮಾರಕ ಯೋಜನೆಗಳನ್ನು ರೂಪಿಸಿ ಪೆಟ್ಟು ತಿಂದು ಈಗ ಪರಿಸರ ಪೂರಕ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದೆ. ಮರುಭೂಮಿಯಲ್ಲೂ ಮರ ಗಿಡಗಳನ್ನು ಬೆಳೆಸುತ್ತಿದ್ದಾರೆ. ಜನಸಂಖ್ಯೆ ನಿಯಂತ್ರಣಕ್ಕೂ ಆಸಕ್ತಿವಹಿಸಿದ್ದಾರೆ. ಚೀನಾ ಪ್ರಗತಿಯ ಮಂಚೂಣಿಯಲ್ಲಿದೆ. ನಾವು ಕೂಡ ಮುಂದಿನ ಪೀಳಿಗೆಗೆ ಸುಸ್ಥಿರ ಸುಭದ್ರ ಅಭಿವೃದ್ಧಿ ಯೋಜನೆಗಳಿಗೆ ಉತ್ತೇಜನ ಕೊಡಬೇಕು. ಆಗ ಮಾತ್ರ ಮುಂದಿನ ಪೀಳಿಗೆ ನೆಮ್ಮದಿಯಿಂದ ಬದುಕಬಹುದು ಎಂದರು. ಮುಖ್ಯ ಶಿಕ್ಷಕಿ ಪಾತಿಮಾ, ಶಿಲ್ಪಾ, ಸಂತೋಷ್ ಇತರರಿದ್ದರು.