ಕಾರ್ಗಲ್ನಲ್ಲಿ ಸಮಗ್ರ ಮತದಾರ ಪಟ್ಟಿ ಪರಿಷ್ಕರಣಾ ಸಭೆಯಲ್ಲಿ ಮುಖ್ಯಾಧಿಕಾರಿ ಎಂ.ಕೆ.ಸುರೇಶ್ ಮಾತನಾಡಿದರು. ಫರ್ನಾಂಡೀಸ್, ಮಾಲಿನಿ, ಪ್ರವೀಣ್ ಇತರರಿದ್ದರು. 
ಶಿವಮೊಗ್ಗ

30ರಿಂದ ಮತದಾರರ ಪಟ್ಟಿ ಪರಿಷ್ಕರಣೆ | SIR meeting

ಶಿವಕುಮಾರ ಎಸ್.ಪಿ.
ಕಾರ್ಗಲ್: ಜೋಗ-ಕಾರ್ಗಲ್ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಸಾಗರ ತಾಲೂಕು ಆಡಳಿತದಿಂದ ಎಸ್‌ಐಆರ್ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಸಂಬಂಧ ಕರೆಯಲಾಗಿದ್ದ ಸಭೆಯಲ್ಲಿ ಭಾರಂಗಿ ಹೋಬಳಿಯ ಒಟ್ಟು 36 ಮಂದಿ ಬಿಎಲ್ಒಗಳಿಗೆ ಸನ್ನದ್ಧರಾಗಲು ಅಂತಿಮ ಹಂತದ ತರಬೇತಿ ನೀಡಲಾಯಿತು.
ಮುಖ್ಯಾಧಿಕಾರಿ ಎಂ.ಕೆ.ಸುರೇಶ್ ಮಾತನಾಡಿ, ಜೂ.30ರಿಂದ ಮತದಾರರ ಪರಿಷ್ಕರಣೆ ಕಾರ್ಯ ಆರಂಭವಾಗಲಿದೆ. ಬಿಎಲ್ಒಗಳು ತಮಗೆ ನಿಗದಿಪಡಿಸಿದ ತಮ್ಮ ಬೂತ್‌ನ ಪ್ರತಿ ಮನೆಗೆ ಭೇಟಿ ನೀಡಬೇಕು. ಮತದಾರನ ವಿಧಾನಸಭಾ ಕ್ಷೇತ್ರದ ಮಾಹಿತಿಯೊಂದಿಗೆ ಪ್ರತಿಯೊಬ್ಬರಿಗೂ ಎರಡು ಅರ್ಜಿಗಳನ್ನು ನೀಡಿ ತುಂಬಬೇಕು. ಅರ್ಜಿಯಲ್ಲಿ ನಿಗದಿಪಡಿಸಿರುವ ಕ್ರಮವನ್ನು ಅನುಸರಿಸಬೇಕು. ಯಾರೂ ಸಹ ಮತದಾರರ ಪಟ್ಟಿಯಿಂದ ಬಿಟ್ಟುಹೋಗದಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಸಾಗರ ತಾಲೂಕು ಚುನಾವಣಾ ಶಿರಸ್ತೇದಾರ್ ಫರ್ನಾಂಡೀಸ್, ಭಾರಂಗಿ ಹೋಬಳಿ ವ್ಯಾಪ್ತಿಯ ನಾಡಕಚೇರಿ ಉಪ ತಹಸೀಲ್ದಾರ್ ಮಾಲಿನಿ, ಅರಳಗೋಡು ಪಿಡಿಒ ಪ್ರವೀಣ್, ಚನ್ನಗೊಂಡ ಪಿಡಿಒ ಎಸ್.ಉಮೇಶ್, ಪಪಂ ನೋಡಲ್ ಅಧಿಕಾರಿ ಸುಭಾಷ್, ಮೇಲ್ವಿಚಾರಕ ಲೋಕೇಶಮೂರ್ತಿ, ಮೇಲ್ವಿಚಾರಕ ಸತೀಶ್ ಕೆ. ನಾಯ್ಕ್ ಇತರರಿದ್ದರು.