ಮೈದೊಳಲು ಗ್ರಾಪಂನಲ್ಲಿ ಆಡಳಿತ ಮಂಡಳಿ ಬೀಳ್ಕೊಡುಗೆ ಸಮಾರಂಭದಲ್ಲಿ ಅಧ್ಯಕ್ಷೆ ಗೀತಮ್ಮ, ಉಪಾಧ್ಯಕ್ಷೆ ವಿನೋದಮ್ಮ ಸೇರಿ ಸದಸ್ಯರನ್ನು ಸನ್ಮಾನಿಸಲಾಯಿತು. ಕೃಷ್ಣೋಜಿ ರಾವ್, ಲಕ್ಷ್ಮೀಬಾಯಿ ಇತರರಿದ್ದರು. 
ಶಿವಮೊಗ್ಗ

ಗ್ರಾಮಗಳ ಅಭಿವೃದ್ಧಿ ಕಾರ್ಯ ಮಾದರಿ | grama panchayath

ಶಿವಕುಮಾರ ಎಸ್.ಪಿ.
ಹೊಳೆಹೊನ್ನೂರು: ಕಳೆದ ಐದು ವರ್ಷಗಳಲ್ಲಿ ಗ್ರಾಪಂ ಆಡಳಿತ ಮಂಡಳಿ ಜನಾನುರಾಗಿಯಾಗಿ ಕೆಲಸ ಮಾಡಿದ ನೆಮ್ಮದಿ ಇದೆ ಎಂದು ಗ್ರಾಪಂ ಅಧ್ಯಕ್ಷೆ ಗೀತಮ್ಮ ಹೇಳಿದರು.
ಮೈದೊಳಲು ಗ್ರಾಪಂನಲ್ಲಿ ಬುಧವಾರ ಆಯೋಜಿಸಿದ್ದ ಆಡಳಿತ ಮಂಡಳಿಯ ಬಿಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಚುನಾಯಿತ ಪ್ರತಿನಿಧಿಯಾಗಿ ಕೆಲಸ ಮಾಡುವುದು ಸುಲಭದ ಮಾತಲ್ಲ. ಗ್ರಾಪಂನ ಸಾಧಕ-ಬಾಧಕಗಳ ಮಧ್ಯೆ ಮೂರು ಗ್ರಾಮಗಳ ಅಭಿವೃದ್ಧಿಗೆ ಪ್ರಮಾಣಿಕವಾಗಿ ಪ್ರಯತ್ನಿಸಲಾಗಿದೆ ಎಂದರು.
ಗ್ರಾಮಾಭಿವೃದ್ದಿ ಮಂಡಳಿಯ ಸಹಕಾರವನ್ನು ಮರೆಯುವಂತಿಲ್ಲ. ಅಭಿವೃದ್ಧಿ ಕಾರ್ಯ ಮಾಡಿದವರನ್ನು ಗ್ರಾಮಸ್ಥರು ಮರೆಯುವ ಮಾತಿಲ್ಲ. ಸಂಸದರು ಹಾಗೂ ಶಾಸಕರ ಸಹಕಾರ ಪಡೆದು ಗ್ರಾಪಂ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳ ಅನುಷ್ಠಾನಕ್ಕೆ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದರು. 
ಉಪಾಧ್ಯಕ್ಷೆ ವಿನೋದಮ್ಮ ಮಾತನಾಡಿ, ವಿವಿಧ ಇಲಾಖೆಗಳಿಂದ 11 ಕೋಟಿ ರೂ.ಗೂ ಹೆಚ್ಚು ಅನುದಾನ ತಂದು ಕಾಮಗಾರಿ ಅನುಷ್ಠಾನ ಮಾಡಲಾಗಿದೆ. ಮೈದೊಳಲು, ಮಲ್ಲಾಪುರ, ಕಲ್ಲಜ್ಜನಾಳ್ ಗ್ರಾಮಗಳಿಗೆ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಅಭಿವೃದ್ಧಿ ಹಾದಿಯಲ್ಲಿ ಏಳುಬೀಳುಗಳನ್ನು ಸಹಿಸಿಕೊಂಡು ಉತ್ತಮ ಗ್ರಾಪಂ ಎಂದು ಗುರುತಿಸಿಕೊಳ್ಳುವ ಸಾಧನೆ ಮಾಡಿರುವುದು ಸವಾಲಿನ ಕೆಲಸ ಎಂದರು.
ಕೃಷ್ಣೋಜಿ ರಾವ್, ಚಂದ್ರೋಜಿ ರಾವ್, ಪರಮೇಶ್ವರಪ್ಪ ಮೂಡ್ಲೆರ್, ಮುತ್ಯಾಲ ರಾಮರಾವ್, ಲಕ್ಷ್ಮೀಕಾಂತ, ರಾಮಪ್ಪ, ಗೀತಮ್ಮ, ಪೂಜಾ, ಅರ್ಪಿತಾ, ರೇಣುಕಮ್ಮ, ಪಿಡಿಒ ಲಕ್ಷ್ಮೀಬಾಯಿ, ಕೆ.ಎಚ್ ಪರಮೇಶ್ವರ್ ರಾವ್, ಮಂಜುನಾಥ್, ಸತೀಶ್, ನಂದಿನಿ, ರಾಜು ಇತರರಿದ್ದರು.