ಹೊಸನಗರ ತಾಲೂಕಿನ ಬಾವಿಕೈ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾಕಾಲ್ ಕಾಲೇಜಿನ ಎನ್‌ಎಸ್‌ಎಸ್ ಶಿಬಿರವನ್ನು ಗ್ರಾಪಂ ಉಪಾಧ್ಯಕ್ಷ ಕೃಷ್ಣಮೂರ್ತಿ ಉದ್ಘಾಟಿಸಿದರು. ಲೋಕೇಶ್, ನಾಗರಾಜ್, ಶ್ರೀಧರ್ ಇದ್ದರು.
ಹೊಸನಗರ: ಬಹುತೇಕ ವಿದ್ಯಾರ್ಥಿಗಳು ಉತ್ತಮ ವ್ಯಾಸಂಗಕ್ಕಾಗಿ ಹಳ್ಳಿಬಿಟ್ಟು ಪಟ್ಟಣಕ್ಕೆ ಹೋಗುತ್ತಿದ್ದಾರೆ. ಆದರೆ ಪ್ರತಿಯೊಬ್ಬರಿಗೂ ಹಳ್ಳಿ ಸಂಸ್ಕೃತಿಯ ಜ್ಞಾನ ಅಗತ್ಯ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಲೋಕೇಶ್ ಹೇಳಿದರು.
ಕೇಡಲಸರದ ಕಾಕಾಲ್ ಪ್ರಥಮದರ್ಜೆ ಕಲಾ ಮತ್ತು ವಾಣಿಜ್ಯ ಕಾಲೇಜಿನ ಎನ್‌ಎಸ್‌ಎಸ್ ಘಟಕದಿಂದ ಬಾವಿಕೈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಎನ್‌ಎಸ್‌ಎಸ್ ವಾರ್ಷಿಕ ಶಿಬಿರದಲ್ಲಿ ಮಾತನಾಡಿದ ಅವರು, ಶಿಬಿರದಿಂದ ಶಿಸ್ತು, ಸಂಯಮ, ಸಮಯ ಪಾಲನೆ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಇಂದಿನ ಯುವ ಪೀಳಿಗೆ ಪೇಟೆಯ ವಾತಾವರಣಕ್ಕೆ ಹೊಂದಿಕೊಂಡಂತೆ ಹಳ್ಳಿಯ ವಾತಾವರಣಕ್ಕೆ ಹೊಂದಿಕೊಳ್ಳುವುದು ಕಷ್ಟ. ಇಂತಹ ಶಿಬಿರಗಳಲ್ಲಿ ಭಾಗವಹಿಸುವುದರಿಂದ ಹಳ್ಳಿಯ ಸಂಸ್ಕೃತಿ, ಆಚಾರ, ವಿಚಾರ, ತಿಳಿದುಕೊಳ್ಳಲು ಸಹಾಯವಾಗುತ್ತದೆ. ಸಮುದಾಯ ಭವನಕ್ಕೆ 3 ಲಕ್ಷ ರೂ. ನೀಡುವ ಜತೆಗೆ ಸಭಾಭವನ ಪೂರ್ಣಗೊಳಿಸಲು ಶಾಸಕ ಆರಗ ಜ್ಞಾನೇಂದ್ರ ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.
ರೋಟರಿ ಸಹಕಾರದಲ್ಲಿ ನಡೆದ ಶಿಬಿರದಲ್ಲಿ 21ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಸೊನಲೆ ಗ್ರಾಪಂ ಉಪಾಧ್ಯಕ್ಷ ಕೃಷ್ಣಮೂರ್ತಿ ಶಿಬಿರ ಉದ್ಘಾಟಿಸಿದರು. ಕೇಡಲಸರ ವಿದ್ಯಾಭಿವೃದ್ಧಿ ಸಂಘದ ಉಪಾಧ್ಯಕ್ಷ ನಾಗರಾಜ ಸಭಾಹಿತ್, ನಿರ್ದೇಶಕ ವಿ.ಜಿ.ಶ್ರೀಧರ್, ಪ್ರಾಚಾರ್ಯ ಎ.ಎಸ್.ಗಣಪತಿ, ಮುಖ್ಯಶಿಕ್ಷಕ ರಾಮು, ಪ್ರಮುಖರಾದ ಡಾ. ಆನಂದ್, ವಾಸು, ಚನ್ನಕೇಶವ, ಗಿರೀಶ್, ನಾಗರಾಜ್, ರವಿ ಇದ್ದರು.