ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರನ್ನು ಕರೆದೊಯ್ಯಲು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿದ್ದ ಭಾರತೀಯ ವಾಯುಸೇನೆ ವಿಶೇಷ ವಿಮಾನ. 
ಶಿವಮೊಗ್ಗ

ವಿಶೇಷ ವಿಮಾನದಲ್ಲಿ ಉಪ ರಾಷ್ಟ್ರಪತಿ ಪ್ರಯಾಣ | Indian Air Force

ಪ್ರಮುಖ ಮುಖ್ಯಾಂಶಗಳು

  • ಸೋಗಾನೆಯ ವಿಮಾನ ನಿಲ್ದಾಣದಿಂದ ತೆರಳಿದ ಸಿ.ಪಿ.ರಾಧಾಕೃಷ್ಣನ್
  • ದಾವಣಗೆರೆಯ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ 75ನೇ ವಾರ್ಷಿಕೋತ್ಸವ
  • ಬೆಂಗಳೂರಿನಿಂದ ಮಧ್ಯಾಹ್ನವೇ ಶಿವಮೊಗ್ಗಕ್ಕೆ ಆಗಮಿಸಿದ್ದ ವಾಯುಸೇನೆ ವಿಮಾನ
ಶಿವಮೊಗ್ಗ: ಸೋಗಾನೆಯ ವಿಮಾನ ನಿಲ್ದಾಣದಿಂದ ಭಾರತೀಯ ವಾಯುಸೇನೆ(Indian Air Force)ಯ ವಿಶೇಷ ವಿಮಾನವು ಶುಕ್ರವಾರ ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರನ್ನು ಕರೆದೊಯ್ಯಿತು.
ಸಿ.ಪಿ.ರಾಧಾಕೃಷ್ಣನ್ ಅವರು ದಾವಣಗೆರೆಯ ಯು.ಬಿ.ಡಿ.ಟಿ ಇಂಜಿನಿಯರಿಂಗ್ ಕಾಲೇಜಿನ 75ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ಸಂಜೆ 4ಕ್ಕೆ ಹೆಲಿಕಾಪ್ಟರ್‌ನಲ್ಲಿ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿ, 4.10ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಾಯು ಸೇನೆಯ ವಿಶೇಷ ವಿಮಾನದಲ್ಲಿ ಗೋವಾಗೆ ತೆರಳಿದರು. 
ಉಪ ರಾಷ್ಟ್ರಪತಿ(Vice President) ಸಿ.ಪಿ.ರಾಧಾಕೃಷ್ಣನ್ ಅವರು ವಾಯು ಸೇನೆಯ ಕೆ 5012 ವಿಶೇಷ ವಿಮಾನದಲ್ಲಿ ಬೆಳಗ್ಗೆ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದರು. ಅಲ್ಲಿ ಆರ್ಟ್ ಆಫ್ ಲಿವಿಂಗ್‌ನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ಉಪ ರಾಷ್ಟ್ರಪತಿ ಅವರು ದಾವಣಗೆರೆಗೆ ತೆರಳಿದ್ದರು. ವಾಯು ಸೇನೆ ವಿಶೇಷ ವಿಮಾನ(Special Aircraft)ವು ಬೆಂಗಳೂರಿನಿಂದ ಮಧ್ಯಾಹ್ನವೇ ಶಿವಮೊಗ್ಗಕ್ಕೆ ಆಗಮಿಸಿತ್ತು.
ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಾಣದ ಬಳಿಕ ಮೊದಲ ಬಾರಿಗೆ ಇಲ್ಲಿನ ರನ್ ವೇ ಮೇಲೆ ಲ್ಯಾಂಡ್ ಆಗಿದ್ದು ಇದೇ ವಿಶೇಷ ವಿಮಾನ. 2023ರ ಫೆ.21ರಂದು ವಾಯು ಸೇನೆಯ ಕೆ 5012 ವಿಶೇಷ ವಿಮಾನ ಶಿವಮೊಗ್ಗದಲ್ಲಿ ಲ್ಯಾಂಡ್ ಆಗಿತ್ತು.