ವಿಶ್ವ ಮಟ್ಟಕ್ಕೆ ಆಯ್ಕೆಯಾದ ಶಿಕಾರಿಪುರ ತಾಲೂಕು ವೈದ್ಯಾಧಿಕಾರಿ ಡಾ. ಎಂ.ರವಿ. 
ಶಿವಮೊಗ್ಗ

ಈಜು ಸ್ಪರ್ಧೆಯಲ್ಲಿ ಪಶು ವೈದ್ಯಾಧಿಕಾರಿ ಡಾ. ರವಿಗೆ ಚಿನ್ನದ ಪದಕ । Masters swimming competition

ಶಿವಮೊಗ್ಗ: ಪಶು ವೈದ್ಯಕೀಯ ಇಲಾಖೆಯ ಶಿಕಾರಿಪುರ ತಾಲೂಕು ವೈದ್ಯಾಧಿಕಾರಿ ಡಾ. ಎಂ.ರವಿ ಅವರು ಹೈದರಾಬಾದ್‌ನ ತೆಲಂಗಾಣ ಕ್ರೀಡಾ ಪ್ರಾಧಿಕಾರದಲ್ಲಿ ನಡೆದ ರಾಷ್ಟ್ರಮಟ್ಟದ ಮಾಸ್ಟರ್ಸ್ ಈಜು ಸ್ಪರ್ಧೆ(swimming competition)ಯಲ್ಲಿ ಎರಡು ಚಿನ್ನದ ಪದಕ ಪಡೆದು ವಿಶ್ವ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅಖಿಲ ಭಾರತ ಮಾಸ್ಟರ್ಸ್ ಫೆಡರೇಷನ್(Masters Federation) ಮಂಗಳವಾರ ಹೈದರಾಬಾದ್‌ನಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತ ಮಾಸ್ಟರ್ಸ್ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್ 2026ರ ಈಜು ಸ್ಪರ್ಧೆಯ 51-54 ವರ್ಷದೊಳಗಿನ 50 ಮೀಟರ್ ಬಟರ್ ಫ್ಲೈ (Butterfly) ಹಾಗೂ 100 ಮೀಟರ್ ಬ್ರೆಸ್ಟ್‌ಸ್ಟ್ರೋಕ್(Breaststroke) ವಿಭಾಗದಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದಿದ್ದಾರೆ. 
ಈ ಮೂಲಕ ಏಪ್ರಿಲ್‌ನಲ್ಲಿ ಮಲೇಷ್ಯಾ(Malaysia) ಅಥವಾ ಥೈಲ್ಯಾಂಡ್‌ನಲ್ಲಿ ನಡೆಯುವ ವಿಶ್ವ ಮಾಸ್ಟರ್ಸ್ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಸಂಗಮೇಶ್ ಪಾರಶೆಟ್ಟಿ ಮತ್ತು ರಮೇಶ್ ಪಾರಶೆಟ್ಟಿ ತರಬೇತಿ ನೀಡಿದ್ದರು.