ಸೊರಬ ಪಟ್ಟಣದ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಯುವ ಬ್ರಿಗೇಡ್‌ನಿಂದ ವಿವೇಕಾನಂದ ಜಯಂತಿ ಆಚರಿಸಲಾಯಿತು. ಮಹೇಶ್ ಖಾರ್ವಿ, ರಂಗನಾಥ ಮೊಗವೀರ್, ಮಂಜುನಾಥ ಶೆಟ್ಟಿ ಇತರರಿದ್ದರು. 
ಶಿವಮೊಗ್ಗ

ಯುವಶಕ್ತಿಯಲ್ಲಿ ಅಚಲ ನಂಬಿಕೆ | vivekananda

ಸೊರಬ: ಭಾರತ ಮಾತ್ರವಲ್ಲದೆ ಪ್ರಪಂಚದ ಇತರೆ ದೇಶಗಳಲ್ಲೂ ಸ್ವಾಮಿ ವಿವೇಕಾನಂದರ ತತ್ವಗಳು, ಬದುಕಿದ ರೀತಿ, ಯುವ ಜನತೆಗೆ ನೀಡಿದ ಸ್ಫೂರ್ತಿಯ ಮಾತುಗಳು ಜನಪ್ರಿಯವಾಗಿವೆ ಎಂದು ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕ ಮಹೇಶ್ ಖಾರ್ವಿ ಹೇಳಿದರು.
ವಿವೇಕಾನಂದ ಜಯಂತಿ ಅಂಗವಾಗಿ ಪಟ್ಟಣದ ಹೊಸಪೇಟೆ ಬಡಾವಣೆಯ ಶ್ರೀ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಸೋಮವಾರ ಯುವ ಬ್ರಿಗೇಡ್‌ನಿಂದ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಾಮಿ ವಿವೇಕಾನಂದರ ಜನ್ಮದಿನದಂದು ರಾಷ್ಟ್ರೀಯ ಯುವ ದಿನವನ್ನು ಆಚರಿಸಬೇಕು ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಭಾರತದ ಬಗ್ಗೆ ಹೆಮ್ಮೆಪಡುವಂತೆ ಚಿಕಾಗೋದಲ್ಲಿ ಭಾಷಣ ಮಾಡಿದರು. ಯುವ ಶಕ್ತಿ, ಸಾಮರ್ಥ್ಯದ ಬಗ್ಗೆ ವಿಶ್ವಕ್ಕೆ ಸಾರಿ ಹೇಳಿದವರಲ್ಲಿ ಸ್ವಾಮಿ ವಿವೇಕಾನಂದ ಮೊದಲಿಗರು ಎಂದರು. 
ಯುವ ಬ್ರಿಗೇಡ್ ತಾಲೂಕು ಸಂಚಾಲಕ ರಂಗನಾಥ ಮೊಗವೀರ್, ಪ್ರಜಾ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಮಂಜುನಾಥ ಶೆಟ್ಟಿ, ಪ್ರಮುಖರಾದ ಬಸವರಾಜ ಪಾಟೀಲ್, ಚಂದ್ರಶೇಖರ ಜೈನ್, ಲಕ್ಷ್ಮೀಶ, ಅಣ್ಣಪ್ಪ, ರಾಘು ಆಚಾರ್, ಶಿವಕುಮಾರ್, ಸಲೀಂ, ಓಂಕಾರಪ್ಪ, ಷಣ್ಮುಖ, ಮದನ್, ಮದನ್‌ಕುಮಾರ್, ಚಂದು ಇತರರಿದ್ದರು.