ಯಡೇಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮವನ್ನು ಎಂಎಲ್‌ಸಿ ಸಿ.ಟಿ.ರವಿ ಉದ್ಘಾಟಿಸಿದರು. ಶ್ರೀನಿವಾಸ್, ಮಲ್ಲೇಶಪ್ಪ, ತ್ರಿಮೂರ್ತಿ ಇತರರಿದ್ದರು. 
ಶಿವಮೊಗ್ಗ

ಕೌಟುಂಬಿಕ ಸಾಮರಸ್ಯದಿಂದ ಒಗ್ಗಟ್ಟು | Hindu sangama

ಶಿವಕುಮಾರ ಎಸ್.ಪಿ.
ಹೊಳೆಹೊನ್ನೂರು: ಜಾತಿ ಭೇದ ಮರೆತು ಸಾಮರಸ್ಯ ಎಂಬ ಹಣತೆ ಹಚ್ಚೋಣ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು.
ಯಡೇಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸನಾತನ ಎಂದರೆ ಆದಿ ಮತ್ತು ಅಂತ್ಯ ಇಲ್ಲದಿರುವುದು. ಹಿಂದೂ ಎಂದರೆ ದೇವನೊಬ್ಬ ನಾಮ ಹಲವು ಎಂಬ ನಂಬಿಕೆ ಇರುವವರು ಎಂದು ವಿಶ್ಲೇಷಿಸಿದರು.
ಸಂಸ್ಕಾರ, ಸ್ವಾವಲಂಬನೆ, ಸ್ವಾಭಿಮಾನ, ಸಾಮರಸ್ಯವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಂಡರೆ ಭಾರತ ವಿಶ್ವಗುರು ಆಗುವುದರಲ್ಲಿ ಸಂದೇಹವಿಲ್ಲ. ವಿಶ್ವವೇ ಒಂದು ಕುಟುಂಬ ಭಾವಿಸುವವರು ಹಿಂದುಗಳು. ಸಂಸ್ಕಾರ ನೀಡುತ್ತಿರುವ ಸಂಘ ವಿಶ್ವಕ್ಕೆ ಮಾದರಿ. ಕುಟುಂಬಗಳಲ್ಲಿ ಸಾಮರಸ್ಯವಿದ್ದರೆ ದೇಶ ತಾನಾಗಿಯೇ ಒಗ್ಗಟ್ಟಾಗುತ್ತದೆ ಎಂದರು.
ಮನೆಯಲ್ಲಿ ಮಕ್ಕಳಿಗೆ ಸಂಸ್ಕಾರ ಕಲಿಸಬೇಕು. ರಾಮಾಯಣ, ಮಹಾಭಾರತ, ವಚನಗಳು ಹಾಗೂ ದಾಸರ ಪದಗಳನ್ನು ಕಲಿಸುವುದರಿಂದ ಮನೆಯೊಂದು ಮೂರು ಬಾಗಿಲು ಆಗುವುದನ್ನು ತಡೆದು ಮನೆತನದ ಪರಂಪರೆ ಉಳಿಸಬಹುದು ಎಂದು ಹೇಳಿದರು. ಬಸವಣ್ಣ, ಬುದ್ಧ, ಕನಕದಾಸರು ಅಂಬೇಡ್ಕರ್ ಗುಣದ ಕಾರಣಕ್ಕೆ ಶ್ರೇಷ್ಠರಾಗಿದ್ದಾರೆ. ಪರೋಪಕಾರವೇ ಪುಣ್ಯ. ಪರನಿಂದನೆ ಮಾಡಿದರಿಗೆ ಪಾಪಿ ಎನ್ನಲಾಗುವುದು. ಸಾಮರಸ್ಯರದ ಭಾವವನ್ನು ಗಟ್ಟಿಗೊಳಿಸಬೇಕು. ನಮ್ಮ ದೇಶದಲ್ಲಿ ಸಾಮರ್ಥ್ಯ, ಜ್ಞಾನಕ್ಕೆ ಕೊರತೆಯಿಲ್ಲ. ಆದರೂ ಪರಕೀಯರ ಆಳ್ವಿಕೆಗೆ ಒಳಪಟ್ಟಿದ್ದೇವೆ. ಈಗ ನಾವು ಎಚ್ಚೆತ್ತುಕೊಳ್ಳದಿದ್ದರೆ ನಮ್ಮ ಮಕ್ಕಳನ್ನು ಕಾಪಾಡಿಕೊಳ್ಳುವುದು ಕಷ್ಟವಾಗಲಿದೆ ಎಂದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ್, ಮಂಡಲ ಅಧ್ಯಕ್ಷ ಮಲ್ಲೇಶಪ್ಪ, ತಾಲೂಕು ಸಂಚಾಲಕ ತ್ರಿಮೂರ್ತಿ, ಸುಬ್ರಮಣಿ, ಕೆ.ಪಿ.ಕಿರಣ್‌ಕುಮಾರ್, ಯುವರಾಜ್, ಡಾ. ಮಂಜುಪ್ಪ, ಸುಧಾಮಣಿ ಬೋರಯ್ಯ, ಪಾಲಾಕ್ಷಪ್ಪ, ಮಹಾದೇವಪ್ಪ, ಶಿವಕುಮಾರ್, ನಂದ್ಯಪ್ಪ ಇತರರಿದ್ದರು.