ಸೊರಬದಲ್ಲಿ ಮಕ್ಕಳಿಗೆ ನೀಡುವ ಸಮವಸ್ತ್ರಗಳನ್ನು ಆಯಾ ಶಾಲಾ ಶಿಕ್ಷಕರಿಗೆ ವಿತರಿಸಲಾಯಿತು. ಆರ್.ಪುಷ್ಪಾ, ಪರಮೇಶ್ವರಪ್ಪ, ವಿರೂಪಾಕ್ಷಪ್ಪ, ಸಂಜೀವ್ ಇತರರಿದ್ದರು. 
ಶಿವಮೊಗ್ಗ

ವಾರದೊಳಗೆ ಮಕ್ಕಳಿಗೆ ಸಮವಸ್ತ್ರ ವಿತರಣೆ

ಸೊರಬ: ತಾಲೂಕಿನ ಎಲ್ಲ ಶಾಲೆಗಳಲ್ಲೂ ಸಮವಸ್ತ್ರ ವಿತರಣೆ ನಡೆಯುತ್ತಿದ್ದು, ಒಂದು ವಾರದಲ್ಲಿ ಒಂದರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಆಯಾ ಶಾಲೆ ಶಿಕ್ಷಕರು ಸಮವಸ್ತ್ರ ವಿತರಿಸುವರು ಎಂದು ಬಿಇಒ ಆರ್.ಪುಷ್ಪಾ ಹೇಳಿದರು.
ಪಟ್ಟಣದ ದಾಸ್ತಾನು ಕೊಠಡಿಯಲ್ಲಿ ಸಮವಸ್ತ್ರವನ್ನು ಶಿಕ್ಷಕರಿಗೆ ಹಸ್ತಾಂತರಿಸಿ ಮಾತನಾಡಿ, ಸರ್ಕಾರದಿಂದ ಪೂರೈಕೆಯಾದಂತೆ ಇಲಾಖೆ ಕ್ಲಸ್ಟರ್ ಮೂಲಕ ವಿತರಣೆ ಮಾಡುತ್ತಿದೆ. 7,083 ಬಾಲಕಿಯರು ಮತ್ತು 16,218 ಬಾಲಕರಿಗೆ ಸಮವಸ್ತ್ರಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು. ಎಲ್ಲ ಕ್ಲಸ್ಟರ್ ವಿತರಣೆಗೆ ದಿನಾಂಕ ಮತ್ತು ಸಮಯ ನಿಗದಿ ಮಾಡಲಾಗುತ್ತಿದೆ. ವಾರದಲ್ಲಿ ಎಲ್ಲ ಶಾಲೆಗಳಿಗೆ ಸಮವಸ್ತ್ರ ತಲುಪಲಿವೆ. ಹೆಚ್ಚುವರಿ ಅಗತ್ಯವಿದ್ದರೆ ಬೇಡಿಕೆ ಸಲ್ಲಿಸಲಾಗುವುದು ಎಂದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಪರಮೇಶ್ವರಪ್ಪ, ಶಿಕ್ಷಣ ಸಂಯೋಜಕ ವಿರೂಪಾಕ್ಷಪ್ಪ, ಸಂಜೀವ್ ಇತರರಿದ್ದರು.