ಸೊರಬದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಲಕ್ಷ್ಮೀಕಾಂತ್ ಚಿಮಣೂರು ಉದ್ಘಾಟಿಸಿದರು. ಡಾ. ಜ್ಞಾನೇಶ್, ಶಂಕರ ಶೇಟ್, ತೋಟಪ್ಪ ಇತರರಿದ್ದರು. 
ಶಿವಮೊಗ್ಗ

ರಕ್ತದಾನದ ಮಹತ್ವ ಅರಿತುಕೊಳ್ಳಿ

ಸೊರಬ: ಆರೋಗ್ಯವಂತ ಯುವಜನರು ರಕ್ತದಾನ ಮಾಡಲು ಮುಂದಾಗಬೇಕು ಎಂದು ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಲಕ್ಷ್ಮೀಕಾಂತ್ ಚಿಮಣೂರು ಹೇಳಿದರು.
ವಿವಿಧ ಆಸ್ಪತ್ರೆ, ಸಂಘ ಸಂಸ್ಥೆಗಳು, ಸೊರಬ ಐಟಿಐ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ರಕ್ತದಾನ ಮಾಡುವುದರಿಂದ ಆರೋಗ್ಯದ ದೃಷ್ಟಿಯಿಂದಲೂ ಅನೇಕ ಅನುಕೂಲಗಳಿವೆ. ಯುವಜನರು ರಕ್ತದಾನದ ಮಹತ್ವ ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಸಾಗರದ ಮಕ್ಕಳ ಆಸ್ಪತ್ರೆ ವೈದ್ಯ ನಾಗೇಂದ್ರಪ್ಪ ಮಾತನಾಡಿ, ರಕ್ತದಾನ ಅತ್ಯಂತ ಶ್ರೇಷ್ಠ. ಪ್ರತಿ ತಿಂಗಳು ಸಾವಿರಾರು ಯೂನಿಟ್ ರಕ್ತ ಅವಶ್ಯವಿದೆ. ಆದರೆ ರಕ್ತವನ್ನು ಕೃತಕವಾಗಿ ಉತ್ಪಾದನೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಯುವಜನರು ರಕ್ತದಾನ ಮಾಡಬೇಕು ಎಂದರು.
ವೈದ್ಯ ಜ್ಞಾನೇಶ್ ಮಾತನಾಡಿ, ರಕ್ತದ ಬೇಡಿಕೆ ಹೆಚ್ಚಿದ್ದು, ರಕ್ತ ಕೊಡುವವರ ಸಂಖ್ಯೆ ಕಡಿಮೆ ಇದೆ. ರಕ್ತದಾನ ಶಿಬಿರಗಳು ಹೆಚ್ಚು ನಡೆಯಬೇಕು. ರಕ್ತದಾನದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಕನ್ನಡ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಶಂಕರ ಶೇಟ್, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ತೋಟಪ್ಪ, ಶಶಿಕುಮಾರ, ಮಾಲತೇಶ್, ಭಾಗ್ಯಾ, ಕೃಷ್ಣಪ್ಪ, ಉಮೇಶ್, ದಿವಕರ ಬಾವೆ ಇತರರಿದ್ದರು.