ದೆಹಲಿಯಲ್ಲಿ ಧರ್ಮೇಂದ್ರ ಪ್ರಧಾನ್ ಅವರನ್ನು ಬಿ.ವೈ.ರಾಘವೇಂದ್ರ ಭೇಟಿಯಾಗಿ ಶಿವಮೊಗ್ಗ ಜಿಲ್ಲೆಯ ಶೈಕ್ಷಣಿ ವಲಯದ ಅಭಿವೃದ್ಧಿಗೆ ನೆರವು ಕೋರಿದರು. 
ಶಿವಮೊಗ್ಗ

ಯುಜಿಸಿ ವಿಶೇಷ ಅನುದಾನ ಪ್ರಸ್ತಾವನೆಗೆ ಅನುಮೋದಿಸಿ | ugc special grant

ಪ್ರಮುಖ ಮುಖ್ಯಾಂಶಗಳು

  • ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಕೋರಿಕೆ
  • ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರದಾನ್ ಅವರೊಂದಿಗೆ ಚರ್ಚೆ
  • ಕೇಂದ್ರೀಯ ವಿದ್ಯಾಲಯಕ್ಕೆ ಅನುದಾನ ಬಿಡುಗಡೆ ಮಾಡಲು ಮನವಿ
ಶಿವಮೊಗ್ಗ: ಲೋಕಸಭಾ ಸದಸ್ಯ(member) ಬಿ.ವೈ.ರಾಘವೇಂದ್ರ ಗುರುವಾರ ದೆಹಲಿಯಲ್ಲಿ ಕೇಂದ್ರ ಶಿಕ್ಷಣ (eduction) ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿಯಾಗಿ ಶಿವಮೊಗ್ಗ (shivamogga) ಜಿಲ್ಲೆಯ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶೈಕ್ಷಣಿಕ ವಲಯಕ್ಕೆ ನೇರವಾಗಿ ಅನುಕೂಲ ಕಲ್ಪಿಸುವ ಹಲವು ವಿಷಯಗಳ ಕುರಿತು ಚರ್ಚಿಸಿ ಕೇಂದ್ರದ ಸಹಕಾರ ಕೋರಿದರು.
2014ರ ನಂತರ ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಸುಧಾರಣೆಗಳನ್ನು ಪ್ರಸ್ತಾಪಿಸಿದ ಬಿವೈಆರ್, ಇದೇ ವೇಗದಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲೂ ಮೂಲ ಸೌಕರ್ಯ, ಅವಕಾಶಗಳು ಮತ್ತು ಗುಣಮಟ್ಟ ಬಲಪಡಿಸುವ ಅಗತ್ಯವಿದೆ ಎಂದು ಮನವಿ ಮಾಡಿದರು.
ಗ್ರಾಮೀಣ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಕುವೆಂಪು (kuvempu) ವಿವಿಯಲ್ಲಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಕೊರತೆ ಇದೆ. ಹಾಸ್ಟೆಲ್ ನಿರ್ಮಾಣಕ್ಕಾಗಿ ಯುಜಿಸಿ (ugc)ಗೆ ಕಳುಹಿಸಿರುವ ವಿಶೇಷ ಅನುದಾನ ಪ್ರಸ್ತಾವನೆಗೆ ಶೀಘ್ರವೇ ಅನುಮೋದನೆ ನೀಡುವಂತೆ ಒತ್ತಾಯಿಸಿದರು.
ಸಂತೇಕಡೂರಿನಲ್ಲಿ ಕೇಂದ್ರೀಯ ವಿದ್ಯಾಲಯಕ್ಕೆ 2024ರ ಡಿಸೆಂಬರ್‌ನಲ್ಲಿ ಮಂಜೂರಾಗಿರುವ ಹೆಚ್ಚುವರಿ ವಿಭಾಗಗಳಿಗೆ ತಕ್ಕಂತೆ ಅಗತ್ಯ ಮೂಲ ಸೌಲಭ್ಯ ಮತ್ತು ಕೊಠಡಿಗಳ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆ ಮಾಡಬೇಕು. ಸಂಸ್ಕೃತ ಗ್ರಾಮ ಎಂದು ಖ್ಯಾತಿ ಪಡೆದಿರುವ ಮತ್ತೂರು-ಹೊಸಹಳ್ಳಿಯಲ್ಲಿ ರಾಷ್ಟ್ರೀಯ ಆದರ್ಶ ವೇದ ವಿದ್ಯಾಲಯ ಸ್ಥಾಪಿಸುವ ಪ್ರಸ್ತಾವನೆ ಹಲವು ವರ್ಷಗಳಿಂದ ಬಾಕಿ ಉಳಿದಿದೆ. ಈ ಯೋಜನೆ ಅನುಷ್ಠಾನದಿಂದ ಸಂಸ್ಕೃತ ಹಾಗೂ ವೇದಾಧ್ಯಯನಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆಯಲಿದೆ ಎಂದು ಮನವರಿಕೆ ಮಾಡಿಕೊಟ್ಟರು.

ಉಪನ್ಯಾಸಕರ ಸಮಸ್ಯೆಗೆ ಸ್ಪಂದಿಸಿ

ಸೇವೆ ಮತ್ತು ಅರ್ಹತೆ ಆಧಾರದ ಮೇಲೆ ಎರಡು ನಿರ್ದಿಷ್ಟ ಶಿಕ್ಷಕರ ವರ್ಗಗಳ ಸಮಸ್ಯೆಯನ್ನು ಪ್ರಸ್ತಾಪಿಸಿದ ಬಿ.ವೈ.ರಾಘವೇಂದ್ರ, 2009ಕ್ಕೂ ಮುನ್ನ ಎಂ.ಫಿಲ್ ಪದವಿ ಪಡೆದಿರುವ 300ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರಿಗೆ, ಮಹಾರಾಷ್ಟ್ರ ಮಾದರಿಯಲ್ಲಿ ಎನ್‌ಇಟಿಗೆ ಸಮಾನವಾದ ಮನ್ನಣೆ ನೀಡಿ ಅವರ ಸಂಬಳ ಮತ್ತು ಸೇವಾ ಸ್ಥಿರತೆ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.
ಟಿಇಟಿ (ಶಿಕ್ಷಕರ ಅರ್ಹತಾ ಪರೀಕ್ಷೆ) ನಿಯಮ ಜಾರಿಗೆ ಬರುವುದಕ್ಕೂ ಮೊದಲು ನೇಮಕಗೊಂಡಿರುವ ಅನುಭವಿ ಶಿಕ್ಷಕರಿಗೆ ಸುಪ್ರೀಂ ಕೋರ್ಟ್ ತೀರ್ಪಿನಿಂದ ಉಂಟಾಗಿರುವ ಆತಂಕ ನಿವಾರಿಸಬೇಕು. ಅವರಿಗೆ ಟಿಇಟಿ ಪರೀಕ್ಷೆಯಿಂದ ವಿನಾಯಿತಿ ನೀಡಬೇಕು ಎಂದು ಕೋರಿದರು. ದೇಶದಾದ್ಯಂತ ಪ್ರತಿ ದಿನ 11 ಲಕ್ಷ ಮಕ್ಕಳಿಗೆ ಊಟ ಒದಗಿಸುವ ಪಿಎಂ-ಪೋಷಣ್ ಯೋಜನೆಯ 25 ಲಕ್ಷ ಅಡುಗೆಯವರು ಮತ್ತು ಸಹಾಯಕರಿಗೆ 2009ರಿಂದ ಗೌರವಧನ ಹೆಚ್ಚಿಸಿಲ್ಲ. ಇವರಿಗೆ ಗೌರವಧನ ಹೆಚ್ಚಳ ಮಾಡಿ ಆರೋಗ್ಯ ವಿಮೆ, ಸಾಮಾಜಿಕ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿದರು.