ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ
- ಮತ್ತೆ ನಾಲಿಗೆ ಹರಿಬಿಟ್ಟ ಉದಯನಿಧಿ ಸ್ಟಾಲಿನ್
- ಹಿಂದು ಧರ್ಮಕ್ಕೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ
- ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಕಿಡಿ
ಶಿವಮೊಗ್ಗ: ಸನಾತನ ಹಿಂದು ಧರ್ಮ(Sanatan Hinduism)ದ ನಾಶದ ಬಗ್ಗೆ ಮತ್ತೆ ನಾಲಿಗೆ ಹರಿಬಿಟ್ಟಿರುವ ತಮಿಳುನಾಡಿನ ವಿಧಾನಸಭೆ ಪ್ರತಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ದೇಶದ ಕ್ಷಮೆಯಾಚಿಸಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದರು.
ಉದಯನಿಧಿ ಸ್ಟಾಲಿನ್ (Udayanidhi Stalin) ಹಿಂದು ಸಮಾಜವನ್ನು ನಾಶ ಮಾಡುವುದಾಗಿ ಹೇಳಿದ್ದಾರೆ. ಅವರ ತಾಯಿ ದುರ್ಗಾ ಸ್ಟಾಲಿನ್ ಅವರು ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದಿದ್ದರು. ಅವರ ಹೋರಾಟ ಅಡುಗೆ ಮನೆಯಲ್ಲೇ ನಡೆಯುವುದಿಲ್ಲ. ಹಾಗಾಗಿ ಮೊದಲು ಅವರ ಅಡುಗೆ ಮನೆ(Kitchen)ಯಿಂದಲೇ ಅದು ಪ್ರಾರಂಭವಾಗಲಿ ಎಂದು ಸವಾಲೆಸೆದರು.
ಹಿಂದು ಧರ್ಮಕ್ಕೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ. ಉದಯನಿಧಿ ಒಬ್ಬ ಮೂರ್ಖ. ಆತನ ಹೇಳಿಕೆಗೆ ಬೆಲೆ ಇಲ್ಲ. 800 ವರ್ಷಗಳಿಂದ ಹಿಂದು ಧರ್ಮವನ್ನು ನಾಶ ಮಾಡಲು ಅನೇಕರು ಪ್ರಯತ್ನ ಮಾಡಿದ್ದಾರೆ. ಅವರಿಂದಲೇ ಸಾಧ್ಯವಾಗಿಲ್ಲ. ಹಾಗಾಗಿ ಆತನ ಹೇಳಿಕೆ ಹಾಸ್ಪಾಸ್ಪದವಾಗಿದೆ ಎಂದರು.