ಶಿವಮೊಗ್ಗ ಗ್ರಾಮಾಂತರ ಠಾಣೆ. 
ಶಿವಮೊಗ್ಗ

ರೈತನ ದರೋಡೆ ಮಾಡಿದ್ದ ಇಬ್ಬರ ಸೆರೆ | farmer Robbery

ನವೀನ ಬಿ.ಎಂ

ಪ್ರಮುಖ ಮುಖ್ಯಾಂಶಗಳು

  • ಚಾಕು ತೋರಿಸಿ ಬೆದರಿಸಿ ಹಣ ಮತ್ತು ಚಿನ್ನಾಭರಣ ದರೋಡೆ
  • ಮೂತ್ರವಿಸರ್ಜನೆಗೆ ಕಾರು ನಿಲ್ಲಿಸಿದ್ದ ರೈತ ಆರ್.ಸುಭಾಷ್
  • ಕೊಮ್ಮನಾಳು ಗ್ರಾಮದ ಲಿಖಿತ್, ಬಿಕ್ಕೋನಹಳ್ಳಿಯ ದೀಪು ಬಂಧಿತರು
ಶಿವಮೊಗ್ಗ: ಸವಳಂಗ ರಸ್ತೆಯ ಕೊಮ್ಮನಾಳು ಸಮೀಪದ ಖಾಸಗಿ ಶಾಲೆ ಬಳಿ ರಾತ್ರಿ ಮೂತ್ರವಿಸರ್ಜನೆಗೆ ಕಾರು ನಿಲ್ಲಿಸಿದ್ದ ವ್ಯಕ್ತಿಯನ್ನು ಚಾಕು ತೋರಿಸಿ ಬೆದರಿಸಿ ಹಣ ಮತ್ತು ಚಿನ್ನಾಭರಣ ದರೋಡೆ ಮಾಡಿದ್ದ ಇಬ್ಬರನ್ನು ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು(Rural station police) ಬಂಧಿಸಿದ್ದಾರೆ.
ಕೊಮ್ಮನಾಳು ಗ್ರಾಮ(Kommanalu village

)ದ ಲಿಖಿತ್ ಮತ್ತು ಬಿಕ್ಕೋನಹಳ್ಳಿಯ ದೀಪು ಬಂಧಿತರು. ಹೊಸನಗರ ತಾಲೂಕಿನ ಮತ್ತಲಿಜಡ್ಡು ಗ್ರಾಮದ ರೈತ  ಆರ್.ಸುಭಾಷ್ ದರೋಡೆಗೆ ಒಳಗಾದವರು. ಆರೋಪಿಗಳು ಆ.14ರ ರಾತ್ರಿ  ಸುಭಾಷ್ ಅವರನ್ನು ಬೆದರಿಸಿ 2 ಸಾವಿರ ರೂ. ನಗದು ಹಾಗೂ 90 ಸಾವಿರ ಮೌಲ್ಯದ 6 ಗ್ರಾಂ ಚಿನ್ನದ ಬ್ರಾಸ್‌ಲೆಟ್ ಕಿತ್ತುಕೊಂಡು ಪರಾರಿಯಾಗಿದ್ದರು.

ಈ ಕುರಿತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸುಭಾಷ್ ಅವರು ತಮ್ಮ ಕಾರಿನಲ್ಲಿ ಸ್ವಂತ ಕೆಲಸದ ನಿಮಿತ್ತ ಸವಳಂಗ(Savalanga)ಕ್ಕೆ ತೆರಳಿದ್ದರು. ಕೆಲಸ ಮುಗಿಸಿಕೊಂಡು ಸವಳಂಗ ರಸ್ತೆಯ ಮೂಲಕ ಶಿವಮೊಗ್ಗಕ್ಕೆ ಹಿಂದಿರುಗುತ್ತಿದ್ದ ವೇಳೆ ಖಾಸಗಿ ಶಾಲೆ ಬಳಿ ಕಾರು ನಿಲ್ಲಿಸಿದ್ದರು.ಹಿಂಬದಿಯಿಂದ ಏಕಾಏಕಿ ಬಂದ ಇಬ್ಬರು ಇಲ್ಲಿ ಏಕೆ ನಿಂತಿದ್ದೀಯಾ? ನಿನ್ನ ಜೇಬಿನಲ್ಲಿರುವುದನ್ನು ಕೊಡು ಎಂದು ಬೆದರಿಸಿದ್ದರು. ಚಾಕು ತೋರಿಸಿ ಬೆದರಿಸಿ ದರೋಡೆ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಇಬ್ಬರನ್ನು ಬಂಧಿಸಿ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.