ಶ್ರೀ ರಾಮಾಂಜನೇಯ ದೇವಸ್ಥಾನದಲ್ಲಿ ಕಾಣಿಕೆ ಹುಂಡಿಯಲ್ಲಿದ್ದ ನಗದು ಸೇರಿ ಚಿನ್ನಾಭರಣ ಕಳವು ಮಾಡಿದ್ದ ಭದ್ರಾವತಿ ಹುತ್ತಾ ಕಾಲನಿಯ ವೆಂಕಟೇಶ್ ಕೆಮ್ಮಣ್ಣುಗುಂಡಿ ಮತ್ತು ಪರಶುರಾಮ ಅವರನ್ನು ಪೊಲೀಸರು ಬಂಧಿಸಿದರು. 
ಶಿವಮೊಗ್ಗ

ದೇವಸ್ಥಾನದಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಗಳಿಬ್ಬರ ಬಂಧನ । jewelry Theft

ಶಿವಮೊಗ್ಗ: ಭದ್ರಾವತಿಯ ಭದ್ರಾ ಕಾಲನಿ(Bhadra colony)ಯ ಶ್ರೀ ರಾಮಾಂಜನೇಯ ದೇವಸ್ಥಾನದಲ್ಲಿ ಕಾಣಿಕೆ ಹುಂಡಿಯಲ್ಲಿದ್ದ ನಗದು ಸೇರಿ ಚಿನ್ನಾಭರಣ(jewelry) ಕಳವು ಮಾಡಿದ್ದ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. 
ಭದ್ರಾವತಿ ಹುತ್ತಾ ಕಾಲನಿಯ ವೆಂಕಟೇಶ್ ಕೆಮ್ಮಣ್ಣುಗುಂಡಿ(58) ಮತ್ತು ಪರಶುರಾಮ (20) ಬಂಧಿತರು. ದೇವಸ್ಥಾನ(Temple)ದ ಅರ್ಚಕ ಸೀತಾರಾಮ ಭಟ್ಟರು ಜ.14ರಂದು ರಾತ್ರಿ 8ರ ಸುಮಾರಿಗೆ ಪೂಜೆ ಮುಗಿಸಿಕೊಂಡು ದೇವಸ್ಥಾನದ ಬೀಗ ಮನೆಗೆ ಹೋಗಿದ್ದು, ಮರುದಿನ ಬೆಳಗ್ಗೆ ಬಂದು ನೋಡಿದಾಗ ಕಳ್ಳತನ ಆಗುರುವುದು ಗಮನಕ್ಕೆ ಬಂದಿತ್ತು. 
ದೇವರ ಮೂರ್ತಿ ಮೇಲಿದ್ದ 12 ಸಾವಿರ ರೂ. ಮೌಲ್ಯದ ಒಂದೂವರೆ ಗ್ರಾಂ ಬಂಗಾರದ ತಾಳಿ, 20 ಸಾವಿರ ರೂ. ಮೌಲ್ಯದ 200 ಗ್ರಾಂ ಬೆಳ್ಳಿ ಛತ್ರಿ, 10 ಸಾವಿರ ರೂ. ಮೌಲ್ಯದ ತಲಾ 50 ಗ್ರಾಂನ 2 ಬೆಳ್ಳಿ ಲೋಟ, ದೇವಸ್ಥಾನಕ್ಕೆ ಅಳವಡಿಸಿದ್ದ  6 ಸಾವಿರ ರೂ. ಮೌಲ್ಯದ ಡಿವಿಆರ್‌ (DVR) ಹಾಗೂ ದೇವಸ್ಥಾನದ ಹುಂಡಿಯನ್ನು ಒಡೆದು ಅದರಲ್ಲಿದ್ದ ಅಂದಾಜು 10 ಸಾವಿರ ರೂ. ನಗದು ಕಳ್ಳತನ ಮಾಡಲಾಗಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ, ಕಣಕಟ್ಟೆ ಗ್ರಾಮದ ಆರ್.ಮುದಿಯಳಗನ್ ಭದ್ರಾವತಿ ಹೊಸಮನೆ(Hosamane) ಪೊಲೀಸ್ ಠಾಣೆಗೆ ದೂರು ನೀಡಿದ್ದರು. 
ಭದ್ರಾವತಿ ಡಿವೈಎಸ್‌ಪಿ(Dysp) ಪ್ರಕಾಶ್ ರಾಥೋಡ್ ಮೇಲ್ವಿಚಾರಣೆಯಲ್ಲಿ ಸಿಪಿಐ ನಾಗಮ್ಮ, ಹೊಸಮನೆ ಪೊಲೀಸ್ ಠಾಣೆ ಪಿಎಸ್‌ಐ ಎಂ.ಪಿ.ಸಿದ್ದಪ್ಪ ಮತ್ತು ಸಿಬ್ಬಂದಿ ಆದರ್ಶ ಶೆಟ್ಟಿ, ತೇಜಕುಮಾರ, ಲೋಹಿತ್ ಹಾಗೂ ಜಿಲ್ಲಾ ಫಿಂಗರ್ ಪ್ರಿಂಟ್(Finger print) ತಂಡ ಹಾಗೂ ತಾಂತ್ರಿಕ ವರ್ಗದ ಸಿಬ್ಬಂದಿ ಇಂದ್ರೇಶ್, ಗುರು ಅವರಿದ್ದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ವೆಂಕಟೇಶ್ ಗಾರೆ ಕೆಲಸ ಮಾಡಿಕೊಂಡಿದ್ದರೆ, ಪರಶುರಾಮ ಶಂಕರ ಟಾಕೀಸ್‌ನಲ್ಲಿ ಹೆಲ್ಪರ್ ಮತ್ತು ಕ್ಲೀನರ್ ಆಗಿದ್ದು, ಬಂಧಿತರಿಂದ 13 ಸಾವಿರ ರೂ. ಮೌಲ್ಯದ 1.3 ಗ್ರಾಂ ಬಂಗಾರದ ತಾಳಿ, 8160 ರೂ. ನಗದು ಹಾಗೂ 6 ಸಾವಿರ ರೂ. ಮೌಲ್ಯದ ಡಿವಿಆರ್ ಬಾಕ್ಸ್‌ಗಳನ್ನು ಜಪ್ತಿ ಮಾಡಿದ್ದಾರೆ.