ಟೈಲರಿಂಗ್ ತರಬೇತಿ ಪಡೆದ ಮಹಿಳೆಯರಿಗೆ ಹೊಳೆಹೊನ್ನೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಮಾಣ ಪತ್ರ ವಿತರಿಸಲಾಯಿತು. ಅಜಯ್‌ಕುಮಾರ್, ಜಯಶ್ರೀ, ಸೌಮ್ಯಾ ಇತರರಿದ್ದರು.
ಹೊಳೆಹೊನ್ನೂರು: ತರಬೇತಿ ಪಡೆದ ಮಹಿಳೆಯರು ಹೊಸ ಉದ್ಯೋಗ ಆರಂಭಿಸಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ಅಜಯ್‌ಕುಮಾರ್ ಹೇಳಿದರು.
ನಿಂಬೆಗೊಂದಿಯಲ್ಲಿ ಎಸ್‌ಕೆಡಿಆರ್‌ಪಿ ಸಹಯೋಗದಲ್ಲಿ ಆಯೋಜಿಸಿದ್ದ ಸ್ಫೂರ್ತಿ ಜ್ಞಾನ ವಿಕಾಸ ಕೇಂದ್ರದ 3 ತಿಂಗಳ ಟೈಲರಿಂಗ್ ತರಬೇತಿ ಸಮಾರೋಪದಲ್ಲಿ ಮಾತನಾಡಿ, ಸಾರ್ವಜನಿಕ ವಲಯದಲ್ಲಿ ಗುಣಮಟ್ಟದ ಸೇವೆ ನೀಡಬೇಕು. ನವೀನ ವಿನ್ಯಾಸಗಳನ್ನು ನೀಡುವತ್ತ ಗಮನಹರಿಸಬೇಕು ಎಂದರು.
ಒಕ್ಕೂಟದ ಅಧ್ಯಕ್ಷೆ ಜಯಶ್ರೀ, ಸಮನ್ವಯಾಧಿಕಾರಿ ಸೌಮ್ಯಾ, ಅಶೋಕ್‌ಕುಮಾರ್, ಸುನೀತಾ, ಬಸಮ್ಮ, ಮಲ್ಲಿಕಾರ್ಜುನ, ರೂಪಾ ಇತರರಿದ್ದರು.