ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಮರಳಿದ ಯೋಧ ವೀರೇಶಯ್ಯ ಅವರನ್ನು ಗುಳೇದಹಳ್ಳಿ ಗ್ರಾಮಸ್ಥರು ಸ್ವಾಗತಿಸಿದರು. ಕುಮಾರಸ್ವಾಮಿ, ಟಿ.ಎಂ.ಕೊಟ್ರಯ್ಯ, ಮೃತ್ಯುಂಜಯ ಸ್ವಾಮಿ, ಟಿ.ಎಂ.ರಾಜು ಇತರರಿದ್ದರು. 
ಶಿವಮೊಗ್ಗ

ನಿವೃತ್ತ ಯೋಧ ವೀರೇಶಯ್ಯಗೆ ಸನ್ಮಾನ

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ಯೋಧ ವೀರೇಶಯ್ಯಗೆ ಸನ್ಮಾನ
  • 41 ವರ್ಷಗಳ ಕಾಲ ಕರ್ತವ್ಯ ಸಲ್ಲಿಕೆ
  • ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸಿ ನಿವೃತಿ
ಶಿಕಾರಿಪುರ: ಸುದೀರ್ ಅವಧಿವರೆಗೆ ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಸ್ವಗ್ರಾಮಕ್ಕೆ ಮರಳಿದ ಯೋಧ ಕೆ.ಎಚ್​.ವೀರೇಶಯ್ಯ ಅವರನ್ನು ಗುಳೇದಹಳ್ಳಿ ಗ್ರಾಮಸ್ಥರು ಸನ್ಮಾನಿಸಿದರು. 41 ವರ್ಷಗಳ ಕಾಲ ಕರ್ತವ್ಯ ಸಲ್ಲಿಸಿರುವುದು ಕಡಿಮೆ ಸಾಧನೆಯಲ್ಲ ಎಂದು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು. 18ನೇ ವಯಸ್ಸಿನಲ್ಲಿ ಭಾರತೀಯ ಸೈನ್ಯಕ್ಕೆ ಸೇವೆಗೆ ಸೇರಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಸೇವಾವಧಿ ಮುಗಿಸಿ ಗ್ರಾಮಕ್ಕೆ ವಾಪಸಾಗಿದ್ದಾರೆ. ರಾಷ್ಟ್ರ ರಕ್ಷಣೆ ಮಾಡಲು ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ವೀರೇಶಯ್ಯ ಅವರ ಸಾಧನೆ ಇಡೀ ತಾಲೂಕಿಗೆ ಹೆಮ್ಮೆಯ ಸಂಗತಿ ಎಂದು ಕೊಂಡಾಡಿದರು. ತಾಲೂಕು ವಿಶ್ವ ಹಿಂದೂ ಪರಿಷತ್​ ಅಧ್ಯ ಕುಮಾರಸ್ವಾಮಿ ಹಿರೇಮಠ, ಹಿರಿಯ ಸಹೋದರ ಟಿ.ಎಂ.ಕೊಟ್ರಯ್ಯ, ಮೃತ್ಯುಂಜಯ ಸ್ವಾಮಿ, ಟಿ.ಎಂ.ರಾಜು, ಪತ್ನಿ ಕವಿತಾ ವೀರೇಶಯ್ಯ, ಮಕ್ಕಳಾದ ಸಚಿನ್​, ಸಹನಾ, ಗ್ರಾಮಸ್ಥರಾದ ಶಾಂತಪ್ಪ, ಮಲ್ಲಯ್ಯ, ಚೆನ್ನವಿರಪ್ಪ, ವೀರಪ್ಪ, ಬ್ಯಾಕಪ್ಪ ಇತರರಿದ್ದರು.