ಸೊರಬ ತಾಲೂಕಿನ ದಳವಾಯಿ ಹೊಸಕೊಪ್ಪ ಗ್ರಾಮದಲ್ಲಿ ವಿದ್ಯುತ್ ಕಂಬಗಳ ಮೇಲೆ ಮರ ಬಿದ್ದಿರುವುದು.
ಸೊರಬ: ತಾಲೂಕಿನಲ್ಲಿ ಬಿರುಗಾಳಿ ಸಹಿತ ಮಳೆಯಿಂದ ಮರಗಳು ಬಿದ್ದು ವಿದ್ಯುತ್ ಕಂಬಗಳು ತುಂಡಾಗಿವೆ.
ಮಳಲಗದ್ದೆ, ದಳವಾಯಿ ಹೊಸಕೊಪ್ಪ, ಉಳವಿ ಸೇರಿ ಹಲವೆಡೆ ಭಾರಿ ಗಾಳಿ ಮತ್ತು ಮಳೆಯಾಗಿದೆ. ಗಾಳಿ ರಭಸಕ್ಕೆ ಮಳಲಗದ್ದೆ ಗ್ರಾಮದಲ್ಲಿ ಸಾಗರ-ಸೊರಬ ಮುಖ್ಯ ರಸ್ತೆಯಲ್ಲಿ ಮರಗಳು ಬಿದ್ದು ಸಂಚಾರಕ್ಕೆ ಅಡಚಣೆಯಾಗಿತ್ತು. ಮಳಲಗದ್ದೆ ಗದ್ದೆಮನೆ ರಸ್ತೆ, ನಿಸರಾಣಿ-ಉಳವಿ ರಸ್ತೆಯ ದಳವಾಯಿ ಹೊಸಕೊಪ್ಪ ಗ್ರಾಮದಲ್ಲಿ ಮರಗಳು ಬಿದ್ದು ಐದಾರು ವಿದ್ಯುತ್ ಕಂಬಗಳು ತುಂಡಾಗಿವೆ. ಈ ಭಾಗದಲ್ಲಿ ರಾತ್ರಿಯಿಂದ ವಿದ್ಯುತ್ ಸ್ಥಗಿತವಾಗಿದೆ. ಉಳವಿ ಪೇಟಿಯಲ್ಲಿ 10ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಬಿದ್ದಿವೆ.