ಜೋಗ ಜಲಪಾತದ ರಸ್ತೆಯಲ್ಲಿ ಅಡ್ಡಲಾಗಿ ಬೆಳೆದ ಹೊಂಗೆ ಮರವನ್ನು ತೆರವು ಮಾಡುತ್ತಿರುವುದು. ಎಂ.ಕೆ.ಸುರೇಶ್, ಮಂಜುನಾಥ್ ಇತರರಿದ್ದರು.
ಕಾರ್ಗಲ್: ಜೋಗ ಜಲಪಾತದ ಸನಿಹ ಹೊಂಗೆ ಮರದ ಕೊಂಬೆಯೊಂದು ರಸ್ತೆಗೆ ಅಡ್ಡಲಾಗಿ ಬೆಳೆದ ಪರಿಣಾಮ ಸಂಚಾರಕ್ಕೆ ತೊಡಕ್ಕಾಗಿತ್ತು. ಈ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿಯಿಂದ ಮರವನ್ನು ಕತ್ತರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಲಾಯಿತು.
ಪ್ರವಾಸಿ ತಾಣದ ಬಳಿ ರಾತ್ರಿ ಹೊತ್ತು ವಾಹನಗಳು ಸಂಚರಿಸುತ್ತವೆ. ಮಾಹಿತಿ ಇಲ್ಲದ ಪ್ರವಾಸಿ ವಾಹನಗಳು ಮರಕ್ಕೆ ತಗುಲುವ ಅಪಾಯವಿದ್ದ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ಮರವನ್ನು ಕತ್ತರಿಸಲಾಗಿದೆ ಎಂದು ಜೋಗ-ಕಾರ್ಗಲ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಂ.ಕೆ.ಸುರೇಶ್ ತಿಳಿಸಿದರು. ಭಟ್ಕಳ ಮತ್ತು ಸಿದ್ಧಾಪುರ ಮಾರ್ಗದ ಮುಖ್ಯರಸ್ತೆಯಾಗಿದ್ದು, ಬಸ್, ಲಾರಿಯಂತಹ ದೊಡ್ಡ ವಾಹನಗಳು ಸಂಚರಿಸುವ ಸಂದರ್ಭ ಮರಕ್ಕೆ ತಗಲುವ ಸಾಧ್ಯತೆ ಇತ್ತು ಎಂದು ತಿಳಿಸಿದರು. ಅರಣ್ಯ ಇಲಾಖೆಯ ಮಂಜುನಾಥ್ ಹಾಗೂ ಮೆಸ್ಕಾಂ ಸಿಬ್ಬಂದಿ ಇದ್ದರು.