ರಿಪ್ಪನ್‌ಪೇಟೆ ಸಮೀಪದ ಹೊಂಬುಜ ಜೈನಮಠದಲ್ಲಿ ರತ್ನತ್ರಯ ಧಾರಣೆ ಕಾರ್ಯಕ್ರಮದಲ್ಲಿ ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿದರು. 
ಶಿವಮೊಗ್ಗ

ಧರ್ಮ ಪರಿಪಾಲನೆಯಿಂದ ಪರಿವರ್ತನೆ | Relegious programe

ರಿಪ್ಪನ್‌ಪೇಟೆ: ಜೀವನದಲ್ಲಿ ನಿರಂತರವಾಗಿ ಧರ್ಮ ಪರಿಪಾಲನೆಯಿಂದ ಸಾತ್ವಿಕ ಮನೋಭಾವ ಸೃಜಿಸುತ್ತದೆ ಎಂದು ಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಹೊಂಬುಜ ಜೈನಮಠದಲ್ಲಿ ಬುಧವಾರ ರತ್ನತ್ರಯ (ಜನಿವಾರ) ಧಾರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಬಾಲ್ಯದಿಂದ ವಿದ್ಯಾಸಂಪನ್ನರಾಗಿ ವಿಭಿನ್ನ ಕ್ಷೇತ್ರಗಳಲ್ಲಿ ವ್ಯವಹಾರ, ಸೇವೆ ಮಾಡುವಂತಿದ್ದರೂ ಸದ್ಧರ್ಮ ಅನುಸರಿಸುವುದು ಸೂಕ್ತ ಎಂದು  ತಿಳಿಸಿದರು. 
ಸಮ್ಯಕ್‌ದರ್ಶನ, ಜ್ಞಾನ, ಚಾರಿತ್ರ್ಯ ಗುಣಗಳು ಜೈನಧರ್ಮದಲ್ಲಿ ರತ್ನತ್ರಯ (ಜನಿವಾರ) ಎಂದು ಉಲ್ಲೇಖಿಸಲಾಗಿದೆ. ಬಾಲ್ಯದಿಂದಲೇ ರತ್ನತ್ರಯ ಸೂತ್ರಧಾರಣೆ ಮಾಡುವುದರಿಂದ ಪರಿವರ್ತನೆ, ಅಭಿವೃದ್ಧಿ ಕಾಣಬಹುದು. ಅಲ್ಲದೆ ಅದು ಶಾಂತಿಯ ಸಂಕೇತ ಎಂದು ವಿವರಿಸಿದರು.
ಭಕ್ತರಿಗೆ ಶ್ರೀಗಳು ರತ್ನತ್ರಯ (ಜನಿವಾರ) ನೀಡಿದರು. ಪಾರ್ಶ್ವನಾಥ ತೀರ್ಥಂಕರ, ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಆಗಮೋಕ್ತ ವಿಧಿ ವಿಧಾನದಲ್ಲಿ ಪೂಜೆ ನೆರವೇರಿಸಲಾಯಿತು. ರತ್ನತ್ರಯ ಧಾರಣೆಯ ಪೂರ್ವದಲ್ಲಿ ಗುರುಕುಲದ ವಿದ್ಯಾರ್ಥಿಗಳು ಮೋಕಾರ ಮಂತ್ರ ಪಠಿಸಿದರು.