ಸೊರಬ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗಣತಿದಾರರಿಗೆ ತರಬೇತಿ ಕಾರ್ಯಾಗಾರ ನಡೆಯಿತು.
ಸೊರಬ: ಜನಗಣತಿದಾರರಿಗೆ ಮೂರು ದಿನದ ತರಬೇತಿ ಕಾರ್ಯಾಗಾರ ಪಟ್ಟಣದ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಆರಂಭವಾಗಿತು.
ಸಾರ್ವಜನಿಕರು ಸ್ವಯಂಗಣತಿ ಪ್ರಕ್ರಿಯೆಯನ್ನು ನಿರ್ವಹಿಸಬಹುದು. ಏ.16 ರಿಂದ ಮೇ 15ರವರೆಗೆ ನಿಗದಿಪಡಿಸಲಾದ ಕ್ಷೇತ್ರ ಮಾಹಿತಿಗಳ ಸಂಗ್ರಹಣೆಯ ಸಮಯದಲ್ಲಿ ಮೌಲೀಕರಣಕ್ಕಾಗಿ ಗಣತಿದಾರರು ಮನೆಗಳಿಗೆ ಭೇಟಿ ನೀಡಿದಾಗ ಗಣತಿದಾರರು ಯಾವೆಲ್ಲಾ ಮಾಹಿತಿ ಪಡೆಯಬೇಕು, ಹೇಗೆ ಪಡೆಯಬೇಕು ಮತ್ತು ಮೊಬೈಲ್ ಬಳಕೆ ಮತ್ತು ಮಾಹಿತಿ ದಾಖಲಾತಿ ಬಗ್ಗೆ ತರಬೇತಿ ನೀಡಲಾಯಿತು.
ತಾಲೂಕಿನಲ್ಲಿ ಶಿಕ್ಷಣ ಇಲಾಖೆ ಸಿಬ್ಬಂದಿ ಸೇರಿದಂತೆ ಇಲಾಖಾವಾರು ಸಿಬ್ಬಂದಿ ನೇಮಕ ಮಾಡಲಾಗಿದೆ. ಗ್ರಾಮೀಣ ಪ್ರದೇಶಕ್ಕೆ 294 ಗಣತಿದಾರರು, 61 ಸುಪರ್ವೈಸರ್, ಆನವಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ 34 ಗಣತಿದಾರರು, 6 ಸೂಪರ್‌ವೈಸರ್, ಸೊರಬ ಪುರಸಭೆ ವ್ಯಾಪ್ತಿಯಲ್ಲಿ 29 ಗಣತಿದಾರರು ಹಾಗೂ 5 ಸೂಪರ್‌ವೈಸರ್ ಕಾರ್ಯನಿರ್ವಹಿಸಲಿದ್ದಾರೆ. ಈ ಎಲ್ಲ ಗಣತಿದಾರ ರು ತರಬೇತಿಯನ್ನು ಮೂರು ದಿನಗಳ ಕಾಲ ಪಡೆದು ಏ.16ರಿಂದ ಮೇ 15ರವರೆಗೆ ಮನೆ ಗಣತಿ ಪಟ್ಟಿ ಮಾಡಿ ಗ್ರಾಮದ ದೇವಾಲಯ, ಬಾವಿಗಳು, ರಸ್ತೆ, ಮನೆ ಇನ್ನಿತರ ಮಾಹಿತಿಯೊಂದಿಗೆ ನಕ್ಷೆಗಳನ್ನು ತಯಾರು ಮಾಡಿ ಸಮಗ್ರ ಮಾಹಿತಿ ಪಡೆಯಲಿದ್ದಾರೆ