ಹೊಸನಗರ ಮಾಣಿ ಡ್ಯಾಂ ಆಚೆಯ ನೀರುತೊಟ್ಟಿಲು ಶಾಲೆಯ ವಿದ್ಯಾರ್ಥಿಗಳೊಂದಿಗೆ ಪಾಲಕರು, 
ಶಿವಮೊಗ್ಗ

ಹೊಸನಗರ ತಾಲೂಕಿನ ಮೂರು ಶಾಲೆಗಳಿಗೆ ಉತ್ತಮ ಪ್ರಶಸ್ತಿ

ಹೊಸನಗರ; ಯಡೂರು ಮಾಣಿ ಜಲಾಶಯದ ಆಚೆ ಇರುವ ಕುಗ್ರಾಮವಾದ ನೀರುತೊಟ್ಟಿಲು ಈ ಹಿಂದೆ ನಕ್ಸಲ್​ಬಾಧಿತ ಪ್ರದೇಶವಾಗಿತ್ತು. ಆದರೆ ಇದೀಗ ಇಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಉತ್ತಮ ಎಸ್​ಡಿಎಂಸಿ ಪ್ರಶಸ್ತಿಗೆ ಭಾಜನವಾಗಿ ಗಮನ ಸೆಳೆದಿದೆ. 
ನೀರುತೊಟ್ಟಿಲು ಸರ್ಕಾರಿ ಶಾಲೆ ಸೇರಿ ತಾಲೂಕಿನ ಮೂರು ಸರ್ಕಾರಿ ಶಾಲೆಗಳು ರಾಜ್ಯ ಸರ್ಕಾರದ ಶಿಣ ಇಲಾಖೆ ನೀಡುವ ಉತ್ತಮ ಎಸ್​ಡಿಎಂಸಿ ಪ್ರಶಸ್ತಿಗೆ ಭಾಜನವಾಗಿವೆ. ಪ್ರೌಢಶಾಲೆ, ಹಿರಿಯ ಪ್ರಾಥಮಿಕ, ಕಿರಿಯ ಪ್ರಾಥಮಿಕ ವಿಭಾಗದಲ್ಲಿ ತಾಲೂಕಿನ ಮೂರು ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಬೆಳ್ಳೂರು ಸರ್ಕಾರಿ ಪ್ರೌಢಶಾಲೆ, ಬಿದರಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ನೀರುತೊಟ್ಟಿಲು ಕಿರಿಯ ಪ್ರಾಥಮಿಕ ಶಾಲೆ ಉತ್ತಮ ಎಸ್​ಡಿಎಂಸಿಯಾಗಿ ಪುರಸ್ಕಾರಕ್ಕೆ ಭಾಜನವಾಗಿವೆ.
ಶಾಲೆಯ ಚಟುವಟಿಕೆ ಮಾದರಿ: 
ಮಾಣಿ ಜಲಾಶಯದ ಆಚೆಯ ನೀರುತೊಟ್ಟಿಲು ಕಿರಿಯ ಪ್ರಾಥಮಿಕ ಶಾಲೆ ಇತರ ಶಾಲೆಗಳಂತಲ್ಲ. ಇಲ್ಲಿರುವ ವ್ಯವಸ್ಥೆಗೆ ಶಿಣ ನೀಡುವುದೇ ಒಂದು ಸವಾಲು. ಶಿಕ್ಷಣ ಇಲಾಖೆಯ ಪುಷ್ಟಿ ಯೋಜನೆಯಡಿ 2025&26ನೇ ಸಾಲಿನ ಅತ್ಯುತ್ತಮ ಎಸ್​ಡಿಎಂಸಿ ಎಂದು ನೀರುತೊಟ್ಟಿಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆಯ್ಕೆಯಾಗಿದೆ. 50 ಸಾವಿರ ರೂ. ನಗದು ಪುರಸ್ಕಾರಕ್ಕೆ ಭಾಜನವಾಗಿದೆ. ಶಾಲೆಯ ಭೌತಿಕ ಹಾಗೂ ಶೈಣಿಕ ಪರಿಸರ ಬಲಪಡಿಸಲು ಶಾಲಾಭಿವೃದ್ಧಿ ಸಮಿತಿ ದಾನಿಗಳ ಮುಖಾಂತರ ಹಲವಾರು ಸೌಲಭ್ಯ ಪಡೆದಿದ್ದಾರೆ. 2024&25ರಲ್ಲಿ ನಡೆಸಿರುವ ಚಟುವಟಿಕೆಗಳನ್ನು ವಿದ್ಯಾವಾಹಿನಿ ತಂತ್ರಾಂಶದಲ್ಲಿ ಸಲ್ಲಿಸಿದ್ದು, ಸಲ್ಲಿಸಿದ ದಾಖಲೆಗಳನ್ನು ಆಧರಿಸಿ ಕ್ಲಸ್ಟರ್​, ತಾಲೂಕು ಹಾಗೂ ಜಿಲ್ಲಾ ಹಂತದ ಎರಡು ತಂಡಗಳ ಸಮಗ್ರ ಪರಿಶೀಲನೆ ಆಧರಿಸಿ ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ. ಜನವಸತಿ ಪ್ರದೇಶದಿಂದ ಬಹಳ ದೂರ ಇದ್ದರೂ ಈ ಶಾಲೆಯ ಕಾರ್ಯಚಟುವಟಿಕೆ ಮಾದರಿಯಾಗಿದೆ.
ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯ
ಇಡೀ ಶೈಣಿಕ ವರ್ಷಕ್ಕೆ ಬೇಕಾಗುವಷ್ಟು ನೋಟ್​ಬುಕ್​ಗಳು, ಶಾಲಾ ಬ್ಯಾಗ್​, ನೀರಿನ ಬಾಟಲಿ, ಸ್ಯಾಂಡಲ್ಸ್​, ಫಿಲ್ಟರ್​, ಗುಣಮಟ್ಟದ ರಬ್ಬರ್​ ಮ್ಯಾಟ್​, ಪ್ರಯಾಣ ವ್ಯವಸ್ಥೆ, ಕಲಿಕೋಪಕರಣ, ಧ್ವನಿವರ್ಧಕ, ಛತ್ರಿಗಳು, ಮಳೆ ಕವಚ, ಮಕ್ಕಳಿಗೆ ಊಟಕ್ಕೆ ಕುಳಿತುಕೊಳ್ಳಲು ವ್ಯವಸ್ಥೆ, ಪೌಷ್ಟಿಕ ವನ ಹೀಗೆ ಎಸ್​ಡಿಎಂಸಿ ದಾನಿಗಳ ಸಹಕಾರದಿಂದ ಮಕ್ಕಳಿಗೆ ಸೌಲಭ್ಯ ದೊರಕುವಂತೆ ಮಾಡಿದೆ. ಕೇವಲ 11ಮಕ್ಕಳು ಒಂದರಿಂದ ನಾಲ್ಕನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿದ್ದು, ಶಿಕ ಎಸ್​.ಶರವಣ ಅವರ ಶ್ರಮಕ್ಕೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಇಚ್ಛಾಶಕ್ತಿ, ಪ್ರಾಮಾಣಿಕತೆ, ಕಾಳಜಿ ಇದ್ದರೆ ಕುಗ್ರಾಮದ ಶಾಲೆಗಳನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಬಹುದು ಎಂಬುದಕ್ಕೆ ಈ ಶಾಲೆ ನಿದರ್ಶನ.
ಮೂಲ ಸೌಕರ್ಯದಿಂದ ವಂಚಿತವಾದ ಮಾಣಿ ಡ್ಯಾಂ ಆಚೆಯ ನೀರುತೊಟ್ಟಿಲು ಶಾಲೆ ಪ್ರಶಸ್ತಿಗೆ ಭಾಜನವಾಗಿರುವುದು ಗಮನಾರ್ಹ. ಆ ಊರಿನವರ ಕಾಳಜಿ, ಮುಖ್ಯ ಶಿಕ ಶರವಣ ಇವರ ಅವಿರತ ಶ್ರಮ ಇದಕ್ಕೆ ಕಾರಣ.
> ರೇಖಾ ಪ್ರಭಾಕರ್​, ಸಿಆರ್​ಪಿ