ಕೇಂದ್ರ ಕಾರಾಗೃಹದ ಕಂಪೌಂಡ್ ಒಳಗೆ ಎಸೆದಿದ್ದ ಮೊಬೈಲ್, ಸಿಗರೇಟ್, ಬೀಡಿ ಪ್ಯಾಕೇಟ್‌ಗಳನ್ನು ತುಂಗಾನಗರ ಠಾಣೆ ಪೊಲೀಸರು ಜಪ್ತಿ ಮಾಡಿದರು. 
ಶಿವಮೊಗ್ಗ

ಕಾರಾಗೃಹದ ಕಂಪೌಂಡ್ ಒಳಗೆ ಪ್ಯಾಕೇಟ್‌ ಎಸೆದಿದ್ದ ಮೂವರ ಬಂಧನ । Central Jail

ಶಿವಮೊಗ್ಗ: ಸೋಗಾನೆಯ ಕೇಂದ್ರ ಕಾರಾಗೃಹ(Central Jail)ದ ಕಂಪೌಂಡ್ ಒಳಗೆ ಮೊಬೈಲ್(Mobile), ಸಿಗರೇಟ್, ಬೀಡಿ ಪ್ಯಾಕೇಟ್‌ಗಳನ್ನು ಎಸೆದು ಪರಾರಿಯಾಗಿದ್ದ ಮೂವರನ್ನು ತುಂಗಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಟಿಪ್ಪುನಗರದ ಇಮ್ರಾನ್ ಪಾಷಾ ಅಲಿಯಾಸ್ ಇಮ್ಮು (25), ಸೈಯದ್ ಮಲ್ಲಿಕ್ ಅಲಿಯಾಸ್ ತಬ್ರೇಜ್(22) ಹಾಗೂ ಪದ್ಮಾ ಟಾಕೀಸ್ ಸಮೀಪದ ಅಂಬೇಡ್ಕರ್‌ನಗರದ ಅಲ್ಲಾಭಕ್ಷ್ ಅಲಿಯಾಸ್ ಪೊಟ್ಯಾಟೋ(20) ಬಂಧಿತರು.
ಇಮ್ರಾನ್ ಪಾಷಾ ಕ್ಯಾಟೀಂನ್(Canteen) ಕೆಲಸ, ಸೈಯದ್ ಮಲ್ಲಿಕ್ ವೆಲ್ಡಿಂಗ್(Welding) ಕೆಲಸ ಹಾಗೂ ಅಲ್ಲಾಭಕ್ಷ್ ಟೈಲ್ಸ್(Tiles) ಕೆಲಸ ಮಾಡಿಕೊಂಡಿದ್ದು, ಮೂವರು ಕಳೆದ ಶುಕ್ರವಾರ ಕೇಂದ್ರ ಕಾರಾಗೃಹದ ಬಳಿ ತೆರಳಿ ಕಪ್ಪುಬಣ್ಣದ ಗಮ್ ಟೇಪ್‌(Gum tape)ನಿಂದ ಮೊಬೈಲ್, ಚಾರ್ಜರ್, ಸಿಗರೇಟ್, ಬೀಡಿಗಳನ್ನಿಟ್ಟು ಪ್ಯಾಕ್ ಮಾಡಿ ಕಂಪೌಂಡ್ ಎಸೆದು ಪರಾರಿಯಾಗಿದ್ದರು.ಈ ಬಗ್ಗೆ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ರಂಗನಾಥ ಅವರು ತುಂಗಾನಗರ ಠಾಣೆಗೆ ಶನಿವಾರ 
ಠಾಣೆಗೆ ದೂರು ನೀಡಿದ್ದರು. 
ಮೊಬೈಲ್ ಫೋನ್, ಬೀಡಿ ಹಾಗೂ ಸಿಗರೇಟ್(Cigarette) ಅನ್ನು ವಶ ಪಡಿಸಿಕೊಂಡು ತನಿಖೆ ನಡೆಸಲಾಗಿತ್ತು. ಡಿವೈಎಸ್‌ಪಿ(DYSP) ಬಾಬು ಅಂಜನಪ್ಪ ಅವರ ಮಾರ್ಗದರ್ಶನದಲ್ಲಿ ತುಂಗಾನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಕೆ.ಟಿ.ಗುರುರಾಜ್, ಪಿಎಸ್‌ಐಗಳಾದ ಗಾದಿ ಲಿಂಗಗೌಡರ್, ರಘುವೀರ್ ಹಾಗೂ ಅಪರಾಧ ಸಿಬ್ಬಂದಿ ಅರುಣ್, ಕಿರಣ್, ರಂಗನಾಥ್, ತಮ್ಮಣ್ಣ ಜಂಬಗಿ ಅವರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.