ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ  
ಶಿವಮೊಗ್ಗ

ಈಶ್ವರಪ್ಪಗೆ ಮತ್ತೆ ವಿದೇಶದಿಂದ ಬೆದರಿಕೆ ಕರೆ । Threatening call

ಪ್ರಮುಖ ಮುಖ್ಯಾಂಶಗಳು

  • ಬೆದರಿಕೆ ಕರೆಗಳು ಬರುತ್ತಿರುವುದು ಇದೇ ಮೊದಲಲ್ಲ
  • 2020 ಹಾಗೂ 2023ರಲ್ಲೂ ಬಂದಿತ್ತು ಬೆದರಿಕೆ ಕರೆ
  • ಪಿಎಫ್‌ಐ ಹತ್ಯೆಗೆ ಸಂಚು ರೂಪಿಸಿದೆ ನೀಡಿದ್ದರು ದೂರು
ಶಿವಮೊಗ್ಗ: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರಿಗೆ ಮತ್ತೆ ವಿದೇಶದಿಂದ ಬೆದರಿಕೆ ಕರೆ(Threatening call) ಬಂದಿದ್ದು, ಈ ಸಂಬಂಧ ಶಿವಮೊಗ್ಗ ಎಸ್‌ಪಿಗೆ ದೂರು ನೀಡಲು ನಿರ್ಧರಿಸಿದ್ದಾರೆ.
ಜ.7ರಂದು ಈಶ್ವರಪ್ಪ ಅವರಿಗೆ ವಿದೇಶ(Abroad)ದಿಂದ ಕರೆ ಬಂದಿದೆ. ಸದ್ಯ ಪ್ರವಾಸದಲ್ಲಿರುವ ಅವರು ಶಿವಮೊಗ್ಗಕ್ಕೆ ಹಿಂದಿರುಗಿದ ಬಳಿಕ ಜ.9ರಂದು ಬೆಳಗ್ಗೆ ಎಸ್‌ಪಿ ಬಿ.ನಿಖಿಲ್ ಅವರನ್ನು ಭೇಟಿಯಾಗಿ ದೂರು ನೀಡಲಿದ್ದಾರೆ.
ಕೊಲೆ ಬೆದರಿಕೆ(murder threat) ಹಿನ್ನೆಲೆಯಲ್ಲಿ ಈ ಹಿಂದೆ ಈಶ್ವರಪ್ಪ ಅವರಿಗೆ ಪೊಲೀಸ್ ಭದ್ರತೆ ಮತ್ತು ಎಸ್ಕಾರ್ಟ್(Escort) ಒದಗಿಸಲಾಗಿತ್ತು. ಇತ್ತೀಚೆಗೆ ಸರ್ಕಾರ ಎಸ್ಕಾರ್ಟ್ ಮತ್ತು ಪೊಲೀಸ್ ಭದ್ರತೆಯನ್ನು ಹಿಂಪಡೆದಿತ್ತು.
ಇದೇ ಮೊದಲಲ್ಲ: ಕೆ.ಎಸ್.ಈಶ್ವರಪ್ಪ ಅವರಿಗೆ ಬೆದರಿಕೆ ಕರೆಗಳು ಬರುತ್ತಿರುವುದು ಇದೇ ಮೊದಲಲ್ಲ.  2020 ಹಾಗೂ 2023ರಲ್ಲೂ ಬೆದರಿಕೆ ಕರೆ ಬಂದಿತ್ತು. ಪಿಎಫ್‌ಐ(Pfi) ಕಾರ್ಯಕರ್ತರು ತನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆಂಬ ದೂರು ನೀಡಿದ್ದರು. ಅಲ್ಲದೆ, 2024ರಲ್ಲಿ ಬೆಂಬಲಿಗರಿಗೂ ಕೊಲೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಎಸ್‌ಪಿಗೆ ಈಶ್ವರಪ್ಪ ದೂರು ನೀಡಿದ್ದರು.